ಹಿಂದೂ ಧರ್ಮ ಶಾಸ್ತ್ರದಲ್ಲಿ ಸಂಕಲ್ಪ ಮಾಡುವುದರ ಮಹತ್ವ ಏನೆಂದು ತಿಳಿದುಕೊಳ್ಳಿ
ದೇವಸ್ಥಾನಗಳಲ್ಲಿ ಸಂಕಲ್ಪ ಮಾಡಿಸುವುದು ಮತ್ತು ಯಾವುದೇ ಪೂಜೆ, ಹೋಮ,ಜಪ ಮಾಡಬೇಕಾದರೆ ಮೊದಲು ಮಾಡುವುದೇ ಸಂಕಲ್ಪ.
ಸಂಕಲ್ಪ ಎಂದರೆ ನಮ್ಮ ಮನಸ್ಸಿನಲ್ಲಿ ಇರುವ ಹಾಸೆ ಮುಖ್ಯವಾದ ಯೋಜನೆ, ಮತ್ತು ಮಾಡಬೇಕಾದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ದೇವರ ಮುಂದೆ ಮನಸ್ಸಿನಲ್ಲಿ ಬೇಡಿ ಕೊಳ್ಳುವುದೇ ಸಂಕಲ್ಪ.
ಸಂಕಲ್ಪದ ಸಮಯದಲ್ಲಿ ನಮ್ಮ ತಂದೆ ತಾಯಿ ಗುರು ಹಿರಿಯರನ್ನು ನೆನೆಸಿಕೊಂಡು ನಮ್ಮ ಮುಂದಿನ ಕಾರ್ಯ ಅಥವಾ ಮುಂದಿನ ಗುರಿ ಸಾಧಿಸುವುದಕ್ಕೆ ನಮ್ಮ ಅಭೀಷ್ಠ ಸಿದ್ಧಿ ನಿಮಿತ್ತವಾಗಿ ದೇವರ ಮುಂದೆ ಪ್ರಾರ್ಥಿಸಬೇಕು ಮತ್ತು ನಮ್ಮ ಮನೋನಿಶ್ಚಯವನ್ನು ಕಾಯ ವಾಚಾ ಮನಸಾ ಆ ಭಗವಂತನಲ್ಲಿ ಅರ್ಪಣೆ ಮಾಡಿ ಕೊಳ್ಳಬೇಕು.
ನಮ್ಮ ಸಂಕಲ್ಪವು ಎಷ್ಟು ಶ್ರದ್ದೇ ಭಕ್ತಿ ಪ್ರೀತಿಯಿಂದ ಕೂಡಿರುವುದೋ ಅಷ್ಟೇ ಫಲಿತಾಂಶ ಕೂಡ ಉನ್ನತವಾಗಿಯೇ ಸಿಗುತ್ತದೆ. ಯಾರ ಸಂಕಲ್ಪವು ಸಂಶಯಾತ್ಮಕವಾಗಿರುತ್ತದೆಯೋ ಅವರ ಫಲಿತಾಂಶವು ಕೂಡ ಸಂಶಯವಾಗಿಯೇ ಉಳಿದು ಕೊಳ್ಳುತ್ತದೆ. ಸಂಕಲ್ಪ ಮಾಡಿಸುವುದರಿಂದ ಕೇವಲ ನಮ್ಮ ವಯಕ್ತಿಕವಲ್ಲದೇ ದೇಶ, ಸ್ವಗೃಹ, ವಾಸಸ್ಥಳ, ಸಂವತ್ಸರ, ಋತು, ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳು ಅಲ್ಲದೆ ವಿಶ್ವಪ್ರಕೃತಿ ಸ್ಥಿತಿ ಕಾಲ ಮುಂತಾದವುಗಳ ಬಗ್ಗೆ ಅರಿವು ಮುಡಿಸಿ ಎಲ್ಲವನ್ನು ಪ್ರೀತಿಸಿ ಗೌರವಿಸುವ ಶಕ್ತಿಯೇ ಸಂಕಲ್ಪ.
ಒಂದು ನಿರ್ದಿಷ್ಟವಾದ ಮನೋನಿಶ್ಚಯದಿಂದ ಇರುವುದು ಅತ್ಯಗತ್ಯವಾಗುತ್ತದೆ, ನಮ್ಮ ಮನಸ್ಸು ಹಿಡಿತದಲ್ಲಿ ಇಲ್ಲದಿದ್ದರೆ ಯಾವುದೇ ಸಂಕಲ್ಪ, ಪೂಜೆ ಜಪತಪಗಳು ಮಾಡಿದರೂ ಪ್ರಯೋಜನ ಸಿಗುವುದಿಲ್ಲ ನಮ್ಮ ಮನಸ್ಸು ಏಕಾಗ್ರತೆಯಿಂದ ದೃಢನಿಶ್ಚಯದಿಂದಿದ್ದರೆ ಎಲ್ಲಾ ಕಾರ್ಯವು ಒಳ್ಳೆಯದಾಗುತ್ತದೆ, ಯಾವುದೂ ಅಸಾಧ್ಯವಲ್ಲ.