ಕಾರವಾರ: ರಾಜ್ಯ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ಪ್ರಸಂಗಗಳನ್ನು ಡಿಜಿಟಿಲೀಕರಣಗೊಳಿಸುವ ಉದ್ದೇಶದಿಂದ ಕಲಾವಿದರ, ಸಂಘ ಸಂಸ್ಥೆಗಳ ಬಳಿ ಇರುವ ಯಕ್ಷಗಾನ ಪ್ರಸಂಗಗಳನ್ನು ಅಕಾಡೆಮಿಗೆ ಕಳುಹಿಸಿಕೊಡಲು ಕೋರಿದೆ.
ಆಸಕ್ತರು ತಮ್ಮ ಬಳಿ ಇರುವ ಯಕ್ಷಗಾನ(ತೆಂಕು, ಬಡಗು, ಬಡಾಬಡಗು), ಮೂಡಲಪಾಯ ಯಕ್ಷಗಾನ, ಯಕ್ಷಗಾನ ಗೊಂಬೆಯಾಟ, ಕೇಳಿಕೆ, ಘಟ್ಟದಕೋರೆ ಇತ್ಯಾದಿ ಕಲಾಪ್ರಕಾರಗಳ ಆಡಿಯೋ ವೀಡಿಯೋಗಳ ಪ್ರತಿಯನ್ನು ರಿಜಿಸ್ಟಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೆ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ ಬೆಂಗಳೂರು ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08022113146 ಸಂಪರ್ಕಿಸಬಹುದಾಗಿರುತ್ತದೆ.