ಹೊನ್ನಾವರ:ಶಾಸಕ ದಿನಕರ ಶೆಟ್ಟಿಯವರು ಮಂಗಳವಾರದಂದು ಹೊನ್ನಾವರ ಕಾರ್ಯಾಲದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವಿಕರಿಸುವುದು ಮತ್ತು ಕುಂದು ಕೊರತೆಗಳನ್ನ ವಿಚಾರಿಸಿಕೊಳ್ಳುವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನ ವೀಕ್ಷಿಸಿದರು.
ಯುವ ಬ್ರಿಗೆಡ್ ಮನವಿಯ ಮೇರೆಗೆ ಉಪ ಅರಣ್ಯ ಹಾಗು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೊಂದಿಗೆ ಸಮಾಲೊಚನೆ ನಡೆಸಿ ಆಸ್ಪತ್ರೆಯ ಆವಾರದಲ್ಲಿ ಉಪವನ ನಿರ್ಮಿಸುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ಡಾ ಕೃಷ್ಣಾಜಿ ಮತ್ತು ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.