ಸ್ವಾತಿ ಚಿತ್ರದ ಬಲಭಾಗದಲ್ಲಿ (ವಾಟ್ಸಪ್ ಕೃಪೆ)
ಕುಮಟಾ :ತಾಲೂಕಿನ ಬಾಡ ಕಾಲೇಜಿನ ಉಪನ್ಯಾಸಕಿ ಆಗಿದ್ದ ಸ್ವಾತಿ ಗಣೇಶಾಮ್ ಭಟ್ ಕುಮಟಾದ ತಮ್ಮ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಮೂಲತಃ ಮಂಗಳೂರು ಜಿಲ್ಲೆಯ ಕಾಸರಗೋಡು ನಿವಾಸಿಯಾಗಿದ್ದ ಇವರ ಪತಿ ಕುಮಟ ಖಾಸಗಿ ಕಂಪನಿಯೊಂದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ದಂಪತಿಗಳು ಕುಮಟದ ಬಗ್ಗೋಣದಲ್ಲಿ ಬಾಡಿಗೆ ಮನೆ ಮಾಡಕೊಂಡು ವಾಸವಾಗಿದ್ದರು. ಆದರೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸ್ವಾತಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದೆ.
ಸಂಜೆ ಸುಮಾರು ಏಳು ಗಂಟೆ ಸಮಯದಲ್ಲಿ ಸ್ವಾತಿ ತನ್ನ ಪತಿಗೆ ಪೋನ್ ಮಾಡಿ ಬೇಗ ಮನೆಗೆ ಬನ್ನಿ ಮಾರ್ಕೇಟ್ ಹೋಗೋಣ ಎಂದು ಹೇಳಿದ್ದಳಂತೆ. ಸ್ವಲ್ಪ ಹೊತ್ತಲ್ಲೆ ಪತಿ ಮನೆಗೆ ಬಂದು ನೋಡಿದಾಗ ನೇಣಿ ಬೀಗಿದುಕೊಂಡು ಸಾವು ನೋವಿನ ನಡುವೆ ಒತ್ತಾಡುತ್ತಿದ್ದಳು ಎಂದು ವರದಿಯಾಗಿದೆ. ತಕ್ಷಣ ಆಸ್ಪತ್ರೆ ಕರೆದುಕೊಂಡು ಹೋಗಿದ್ದರೂ ಸಹ ಸ್ವಾತಿ ಬದುಕುಳಿಯಲಿಲ್ಲ ಎನ್ನಲಾಗಿದೆ.
ಸ್ವಾತಿ ಕುಟುಂಬಸ್ಥರು ಇದೀಗ ಕುಮಟಾಕ್ಕೆ ಆಗಮಿಸಿದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ. ಪೊಲೀಸ್ ತನಿಖೆ ಬಳಿಕ ಘಟನೆಯ ಸಂಪೂರ್ಣ ಮಾಹಿತಿ ಹೊರ ಬರಲಿದೆ.