ಕುಮಟಾ : ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಹೆಸರು ಮಾಡಿದ್ದ ಕಲಾವಿದ ಹಾಗೂ ಕೀರ್ತನಾಕಾರ ಶ್ರೀ ಪಿ.ಎನ್. ಹೆಗಡೆ ,ವಿವೇಕನಗರ(79) ಇವರು ಇಂದು ಹೃದಯಾಘಾತದಿಂದ ನಿಧನರಾದರು.

ಇವರು ಕರ್ನಾಟಕ ಸರ್ಕಾರದ ಹಣಕಾಸು(ಸಣ್ಣ ಉಳಿತಾಯ)ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿ ವಿವೇಕನಗರದಲ್ಲಿ ವಾಸಿಸಿದ್ದರು.

RELATED ARTICLES  ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಕುರಿತು ಉಲ್ಲೇಖಿಸಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ.

ಕೀರ್ತನೆ ಹಾಗೂ ನಾಟಕ ಯಕ್ಷಗಾನ ಪ್ರಸಂಗದಲ್ಲಿ ಉತ್ಸಾಹ ಹೊಂದಿ ಕಲಾವಿದರಾಗಿ ಬದುಕು ನಡೆಸುತ್ತಿದ್ದರು. ಎಲ್ಲರೊಂದಿಗೆ ನಗು ನಗುತ್ತಾ ಮಾತನಾಡುತ್ತ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಇವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
IMG 20181031 WA0002
ಇವರ ಧರ್ಮಪತ್ನಿ ಸಾವಿತ್ರಿಯವರ ಸ್ಮರಣಾರ್ಥ ಸಾವಿತ್ರಿ ಪ್ರತಿಷ್ಠಾನ ವೊಂದನ್ನು ಸ್ಥಾಪಿಸಿ ಪ್ರತೀ ವರ್ಷ ಕಲಾವಿದರುಗಳನ್ನು ಗೌರವಿಸುತ್ತ ಕಾರ್ಯಕ್ರಮ ಸಂಘಟಿಸುತ್ತ ಬಂದಿದ್ದರು.

RELATED ARTICLES  ಬೆಂಗಳೂರಿನಲ್ಲಿ ಮೂವರಿಗೆ ರೂಪಾಂತರಿ ಕೊರೋನಾ..!

ಓರ್ವ ಪುತ್ರ , ಮೂವರು ಪುತ್ರಿಯರನ್ನು ಹೊಂದಿದ್ದು ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.

ಇವರ ಸಾವು ನೋವು ತಂದಿದ್ದು ಹಿತೈಷಿಗಳು ಹಾಗೂ ಬಂಧುಗಳು ಇವರ ಆತ್ಮಕ್ಕೆ‌ಚಿರ ಶಾಂತಿ ಕೋರಿದ್ದಾರೆ.