ಕುಮಟಾ ತಾಲೂಕಿನ ವನ್ನಳ್ಳಿ ನಿವಾಸಿ ಬಾಬು ಹರಿಕಾಂತ ಮೀನುಗಾರಿಕೆಗೆ ತೆರಳಿ ವನ್ನಳ್ಳಿಗೆ ವಾಪಸ್ ದೋಣಿಯಲ್ಲಿ ಬರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿರುಗಾಳಿಗೆ ಸಿಲುಕಿ ನಾಪತ್ತೆಯಾಗಿದ್ದರು…

ನಾಪತ್ತೆಯಾದ ಬಾಬು ಹರಿಕಾಂತನನ್ನು 9 ದಿನಗಳಿಂದ ಹುಡುಕಲು ಜಿಲ್ಲಾಡಳಿತ ಹಾಗೂ ತಾಲೂಕಾ ಆಡಳಿತ ಅಸಾಧ್ಯವಾದ ಸುದ್ದಿ ತಿಳಿದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಅಮೆರಿಕ ಪ್ರವಾಸದಿಂದ ಬಂದ ತಕ್ಷಣ ಒಂದು ಕ್ಷಣವೂ ಮನೆಯಲ್ಲಿ ಕೂರದೇ ಬಾಬು ಹರಿಕಾಂತ ಮನೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ವಯಕ್ತಿಕವಾಗಿ 25,000/- ಸಾವಿರ ರೂಪಾಯಿ ನೀಡಿ ಸಾಂತ್ವನ ಹೇಳಿದರು..

RELATED ARTICLES  ಅರ್ಥಪೂರ್ಣವಾಗಿ ಆಚರಿಸಿದ ಸಮಾಜಕಾರ್ಯ ತರಬೇತಿ ಶಿಬಿರ

ಸ್ಥಳದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರನ್ನು ಜಂಗಮ ವಾಣಿಯ ಮೂಲಕ ಸಂಪರ್ಕ ಮಾಡಿ ಕಾಣೆಯಾದ ಬಾಬು ಹರಿಕಾಂತನನ್ನು ಹುಡುಕಲು ಮೀನುಗಾರ ದೋಣಿಗಳಿಗೆ ಸೀಮೆಎಣ್ಣೆ ಹಾಗೂ ಸೂಕ್ತ ಅವಶ್ಯಕ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದರು..

ತಕ್ಷಣ ಸ್ಪಂದಿಸಿದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಅವರು ಜಿಲ್ಲಾಧಿಕಾರಿಗಳ ಜೋತೆ ಮಾತನಾಡಿ ಸೀಮೆಎಣ್ಣೆ ಹಾಗೂ ಅವಶ್ಯಕ ವ್ಯವಸ್ಥೆ ಕಲ್ಪಿಸಿದರು.

RELATED ARTICLES  ಕುಮಟಾ ಹವ್ಯಕ ಸಭಾಭವನದಲ್ಲಿ ಯಕ್ಷೋತ್ಸವ

ಕಾಣೆಯಾದ ಬಾಬು ಹರಿಕಾಂತ ಅವರನ್ನು ಒಂದೇ ದಿನದಲ್ಲಿ ಹುಡುಕುವಲ್ಲಿ ಯಶಸ್ವಿಯಾದ ದಿನಕರ ಶೆಟ್ಟಿ ಅವರ ಈ ಕಾರ್ಯಕ್ಕೆ ಹರಿಕಾಂತ ಸಮಾಜದವರು
ಶಾಸಕ ಎಂಬ ಸ್ಥಾನ ಕೆವಲ ಹುದ್ದೆಗೆ ಅಲ್ಲಾ ಜನರ ಕಷ್ಟ ಹಾಗೂ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿ ಕೈಗೆತ್ತಿಕೊಂಡ ಕೆಲಸವನ್ನು ಚಲದಂಕ ಮಲ್ಲನಂತೆ ಮಾಡಿ ತೋರಿಸುವ ದಿನಕರ ಶೆಟ್ಟಿಯವರಿಂದ ಈ ಶಾಸಕ ಸ್ಥಾನಕ್ಕೆ ಹೆಚ್ಚಿನ ಗೌರವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..

ವರದಿ:- ನವೀನ್ ಕುಮಾರ್