sachin
ಭಾರತವನ್ನು 1947ರ ಪೂರ್ವ ಘಟ್ಟದಲ್ಲಿ ಬ್ರಿಟಿಷರು ಬಡ ಭಾರತೀಯರ ಮೇಲೆ ದರ್ಪದ ಆಳ್ವಿಕೆ ಮಾಡಿದ್ದು ನಿಜಾ.ಅಂತಹ ಬ್ರಿಟಿಷರ ಕಪಿ ಮುಷ್ಟಿಯಿಂದ ಭಾರತವನ್ನು  ಬಿಡಿಸಬೇಕು ಎಂಬು ಹಠಕ್ಕೆ ಬಿದ್ದವರಲ್ಲಿ ಅತ್ಯಂತ ಪ್ರಮುಖ ,ಪ್ರಭಾವಿ ವ್ಯಕ್ತಿಗಳ ಪೈಕಿಯಲ್ಲಿ ನೇತಾಜಿ ಮತ್ತು ಗಾಂಧೀಜಿಯ ಹೆಸರು  ನಮ್ಮ ಕಣ್ಣ ಮುಂದೇ ಬರುತ್ತದೆ.
                                       ಇವರಿಬ್ಬರೂ  ಭಾರತ ಮಾತೆಯ ಧೀರ  ಪುತ್ರರು. ತಾಯಿ ಭಾರತಿಯ ಸೇವೆಗಾಗಿ ತಮ್ಮ ಜೀವನದ ಜೊತೆಯಲ್ಲಿ ಜೀವನವನ್ನು ಮುಡಿಪಾಗಿಸಿ ಕೊಂಡವರು .ಇವರಿಬ್ಬರು ತಾಯಿ ಸೇವೆಗಾಗಿ ಹಗಲು ರಾತ್ರಿಗಳೆಂಬ ಬೇಧಭಾವ ವಿಲ್ಲದೆ ದುಡಿದರೂ ಕೂಡಾ ಇವರಿಬ್ಬರಲ್ಲಿ ವ್ಯತ್ಯಾಸವಿದೆ.ಗುರಿ ಒಂದೆ ಆದರು ಮಾರ್ಗಗಳು ಬೇರೇ ಬೇರೇಯಾಗಿವೇ.ಮಾರ್ಗಗಳು ಬೇರೆ ಬೇರೆ ಆದರೂ ಪ್ರೀತಿ ಮತ್ತು ವಿಶ್ವಾಸಕ್ಕೆ ಇವರಿಬ್ಬರ ನಡುವೆ ಕೊರತೆ ಇರಲಿಲ್ಲ.ಶಾಂತಿಯಿಂದ ಪ್ರೀತಿಯಿಂದ ಬ್ರಿಟಿಷರ ಮನ ಒಲಿಸಿ ಸ್ವಾತಂತ್ರ ಪಡೆಯುವುದು ಗಾಂಧಿಯ ಮಾರ್ಗವಾದರೆ ,ರಕ್ತಕ್ಕೆ ರಕ್ತವೆ ಚೆಲ್ಲಿ ಬ್ರಿಟಿಷರನ್ನು ಭಾರತ ದಿಂದ ಓಡಿಸಬೇಕು ಎನ್ನುವ ಮಾರ್ಗ ನೇತಾಜಿಯವರದು.ಜೈಲಿನಲ್ಲಿ ಇದ್ದಾಗ ತಮ್ಮ ತೀವ್ರಗಾಮಿಗಳ ವಿಚಾರ,ಧ್ಯೇಯ,ಧೋರಣೆಯನ್ನು ಭಾರತ ಸಮರ ಎಂಬ ಕೃತಿಯ ಮೂಲಕ ಬಹಿರಂಗ ಪಡಿಸಿಧಾಗ ಗಾಂಧಿವಾದಿಗಳು ,ಗಾಂಧಿ ಅಭಿಮಾನಿಗಳು ಇದನ್ನು ಇಷ್ಟಪಡಲಿಲ್ಲ.ಆಗ ಗಾಂಧೀಜಿ ಈ ಪುಸ್ತಕದ ವಿರುದ್ದ ,ತಮ್ಮ ವಾದಕ್ಕೆ ಬದ್ದವಾಗಿ ನೇತಾಜಿಗೆ ಪತ್ರ ಬರೆಯುತ್ತಾರೆ.ಹೀಗೆ ಗಾಂಧಿಜಿ ನೇತಾಜೀಯವರ ನಿಲುವಿಗೆ ವಿರುದ್ದವಾಗಿ ಬರೆದ ಪತ್ರವೇ  ಇಂದಿನ ನನ್ನ ಅಂಕಣದಲ್ಲಿ ನಿಮ್ಮ ಮುಂದೆ.
ಕ್ರಾಂತಿಯ ಕಿಡಿ ಇದರಲ್ಲಿದೆ.
ಉದ್ವೇಗ ಆವೇಶ ಇದರಲ್ಲಿ ತುಂಬಿದೆ.
ಈ ಕೃತಿಯಲ್ಲಿರುವ ವಿಚಾರಗಳಿಂದ  ಭಾರತೀಯರು ಪ್ರಚೋದನೆಗೆ ಒಳಗಾಗುತ್ತಾರೆ.ಶಾಂತಿ ,ಸಂಯಮಕ್ಕೆ ಈ ನಾಡು ಹೆಸರು ಪಡೆದಿದೆ.ಕ್ರಾಂತಿಕಾರಕ ವಿಚಾರಗಳನ್ನು ತುಂಬಾ ಉದ್ರೇಕಕರ ಮತ್ತು ಪ್ರಚೋದಕ ಶೈಲಿಯಲ್ಲಿ ಹೇಳಲಾಗಿದೆ.
ಭಾರತ ಸಮರ ಉತ್ತಮ ಕೃತಿ ಎಂದು ಹೇಳಲಾರೆ. ಉದ್ದೇಶ ಭಾರತದ ಸ್ವಾತಂತ್ರ ಆಗಿದೆ ನಿಜಾ.ಆದರೆ ಪಡೆಯುವ ಮಾರ್ಗ ಏನಿದೆ ,ಅದು ಯಾವ ರೀತಿಯಿಂದಲೂ ಸರಿಯಲ್ಲ.
ಅಸ್ತ್ರ ಹಿಡಿಯ ಬೇಕೇ..?
ಯುದ್ದ ಮಾಡಬೇಕೆ….?
ಇದರಿಂದ ಏನಾಗುತ್ತದೆ…?ಲಕ್ಷಾಂತರ ಮಂಡಿ ಬ್ರಿಟಿಷರ ಗುಂಡಿಗೆ ಬಲಿಯಾಗುತ್ತಾರೆ.ರಕ್ತದ ಹೊಳೆ ಹರಿಯುತ್ತದೆ.ಇಡಿ ದೇಶ ಭಾರತೀಯರು ಶವಗಳ ಮಹಾ ಸ್ಮಶಾನ ಆಗುತ್ತದೆ.
            ಅಮಾಯಕರನ್ನು ,ಮುಗ್ದರನ್ನು ಬಳಿ ನೀಡಿ ಸ್ವಾತಂತ್ರ್ಯ ಪಡೆಯಬೇಕೇ..?
ಎಲ್ಲರು ಸತ್ತ ಮೇಲೆ ಸಿಗುವ ಆ ಸ್ವಾತಂತ್ರ್ಯ ಏನು ಪ್ರಯೋಜನ..?ಎಲ್ಲರ ಸಮಾಧಿಯ ಮೇಲೆ ಭಾರತ ಸಾಮ್ರಾಜ್ಯ  ಕಟ್ಟಬೇಕೆ..?
ಆದರ ಬದಲಿಗೆ ಈಗ ಇರುವ ರೀತಿಯಲ್ಲಿ ಇದ್ದುಬಿಡೋಣ .ಶಾಂತಿಯ ಹೋರಾಟದಲ್ಲಿ ನಿಮಗೆ ನಂಬಿಕೆ ಇಲ್ಲದಿದ್ದರೆ ಸುಮ್ಮನಿದ್ದುಬಿಡಿ.ಅದರೆ ಪ್ರಚೋದನೆ ಮಾಡಬೇಡಿ.
ಕ್ರಾಂತಿಕಾರಕ ಹೋರಾಟದಲ್ಲಿ ನೀವು ಮರಣಯಜ್ಞ ಪ್ರಾರಂಭಿಸಬೇಡಿ.ನೀವು ಮಹಾನ ದೇಶಪ್ರೇಮಿ!ಆದರ ಬಗ್ಗೆ ಮಾತಿಲ್ಲ.ನಿಮ್ಮಲ್ಲಿ ಉದ್ವೇಗ ,ಭಾವಾವೇಶ ಮತ್ತು ಆತುರ ಜಾಸ್ತಿ ಇದೆ. ಯುದ್ಧದಿಂದ ಹಿಂಸೆಯಿಂದ ಪರಿಣಾಮ ಒಳ್ಳೆಯದಾಗುವುದಿಲ್ಲಾ.ಕ್ರಾಂತಿಕಾರಕ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬೇಡಿ.
ಜನಗಳ ಹಿತ ಮುಖ್ಯ .
ನೀವು ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವುದು ಮತ್ತು ಸ್ವರಾಜ್ಯ. ಸ್ವಾತಂತ್ರ್ಯ ನಿಮ್ಮ ಗುರಿ ಆಗಿದೆ. ನಿಮ್ಮಂತಹ ದೇಶಭಕ್ತರಿಂದ ಭಾರತ ಮಾತೆ ಧನ್ಯಳಾಗಿದ್ದಾಳೆ.
ಆದರೆ ಯುದ್ದ ಬೇಡಾ.
ಕ್ರಾಂತಿಕಾರಕ ಹೊರಟ ಬೇಡಾ.
ತಾಳ್ಮೆ ಕಳೆದುಕೊಳ್ಳಬೇಡಿ.
ಶಾಂತಿಯಿಂದ ಹೊರಡೋಣಾ.
ಅಹಿಂಸೆಯ ಹೋರಾಟಕ್ಕೆ ಯಾವ್ತತಿದ್ದರೂ ಸಹ ಜಯ ಸಿಗುತ್ತದೆ.ಆದರೆ ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ.ತಾಳ್ಮೆ ಅಗತ್ಯವಾಗಿ ಬೇಕಾಗುತ್ತದೆ.ನೀವು ನಿಮ್ಮ ಹೋರಾಟವನ್ನು ಶಾಂತ ಮಾರ್ಗದಲ್ಲಿ ರೂಪಿಸಿಕೊಳ್ಳಿ.
ಅಹಿಂಸೆಗೆ ಬದ್ದರಾಗಿ .
ಇವತ್ತೇ ಶಾಸ್ತ್ರ ತ್ಯಾಗ ಮಾಡಿ!
ನೀವು ಈ ಮಾರ್ಗದಲ್ಲಿ ನಿಮ್ಮ ಹೋರಾಟವನ್ನು ಪ್ರಾರಂಭ ಮಾಡುತ್ತಿರ ಎಂಬ ನಂಬಿಕೆ ನನಗೆ ಇದೆ.ಆ ನಿರೀಕ್ಷೆಯಲ್ಲಿದ್ದೆನೇ.
ಅಲ್ಲಿಗೆ ಗಾಂಧೀಜಿ ನೇತಾಜಿ  ಅವರಿಗೆ ಬರೆದ ಪತ್ರ ಮುಗಿಯಿತು.ಹಾಂಗಂತ ಗಾಂಧೀಜಿ -ನೇತಾಜಿ ಅಂಕಣದ ಸರಣಿ ಮುಗಿದಿಲ್ಲ…..ಮುಂದುವರಿಯುತ್ತದೆ. ಈ ಪತ್ರಕ್ಕೆ  ನೇತಾಜಿಯ ಉತ್ತರ ಏನು ಕೊಟ್ಟಿರಬಹುದು.ಅವರ ಉತ್ತರವನ್ನು ನೋಡುವ ತವಕ ನಿಮ್ಮಲ್ಲಿದ್ದರೆ  ಮುಂದಿನ ಭಾಗದವರೆಗೂ ಕಾಯಬೇಕು ಅಷ್ಟೇ.ಅಷ್ಟಕ್ಕೂ ಕಾಯುವಿಕೆ ನಮಗೆ ಹೊಸದೇನಲ್ಲ ಬಿಡಿ ಕಟ್ಟಪ್ಪ ಬಾಹುಬಲಿಯನ್ನು ಕೊಂದದ್ದು ಯಾಕೆ ಎಂದು ಅರಿಯಲು ಸರಿಸುಮಾರು ಒಂದೂವರೆ ವರ್ಷ ಕಾದಿದ್ದು ನಮಗೆ ,ಮುಂದಿನ ಭಾಗ ತಿಳಿಯಲು ಕೆಲವು ವಾರಗಳು ದೂಡುವುದು ದೊಡ್ಡ ವಿಷಯವೇ…..?
ಲೇಖಕರು-ಸಚಿನ ಹಳದೀಪುರ್.
RELATED ARTICLES  ಸಾಧಕನು ಸಾಧನೆಯ ಹೊರತಾಗಿ ಒಂದು ಕ್ಷಣವನ್ನೂ ಹಾಳುಮಾಡಬಾರದು.