ಅಂಕೋಲಾ : ತಾಲೂಕಿನ ಹಾರವಾಡಾ ಗ್ರಾಮದ ಹರಿಕಂತ್ರವಾಡಾಡ ಬಳಿ ಇರುವ ಗೇರು ಪ್ಲಾಂಟೇಷನ್‌ಲ್ಲಿ ಮಣ್ಣಿನಲ್ಲಿ ಹೂತಿಡಲಾಗಿದ್ದ ಅಕ್ರಮ ಗೋವಾ ಸಾರಾಯಿಯನ್ನು ಅಬಕಾರಿ ಇಲಾಖೆಯವರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.

ವಶಪಡಿಸಿಕೊಂಡ ಮದ್ಯವು ಗೋವಾ ಪೇನ್ನಿ ಮತ್ತು ವಿಸ್ಕಿಯಾಗಿದ್ದು ೫೧ ಲೀ. ೧೫೫೦೦ ಮೌಲ್ಯದ ಅಕ್ರಮ ಸಾರಾಯಿ ಇದು ಎಂದು ಮಾಹಿತಿ ಲಭ್ಯವಾಗಿದೆ.

RELATED ARTICLES  ಐಸಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ.

ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಉಪ ನೀರಿಕ್ಷಕ ಮಂಜುನಾಥ ಎಚ್.ಎಸ್ ಮಾಹಿತಿ ನೀಡಿದ್ದು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದಿದ್ದಾರೆ.

RELATED ARTICLES  ನಾಮಪತ್ರ ಸಲ್ಲಿಸಿದ ನಿವೇದಿತ ಆಳ್ವಾ : ಸಹಸ್ರಾರು ಕಾರ್ಯಕರ್ತರ ಜೊತೆ ಶಕ್ತಿ ಪ್ರದರ್ಶನ.

ಅಭಕಾರಿ ನೀರಿಕ್ಷಕ ಮಂಜುನಾಥ. ಎಚ್.ಎಸ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಭಕಾರಿ ರಕ್ಷಕರಾದ ಸುರೇಶ ಹಾರೊಗುಪ್ಪ, ರಂಜನಾ ಡಿ.ನಾಯ್ಕ, ಚಾಲಕ ಬಸೀರ್ ಅಹ್ಮದ್ ಮನಗುಳಿ, ಸಿಬ್ಬಂದಿ ರಾಮಚಂದ್ರ ನಾಯ್ಕ, ವಿಠ್ಠಲ ನಾಯ್ಕ ಕಾರ್ಯಚರಣೆಯಲ್ಲಿದ್ದರು.