ಕಾರವಾರ: ಕರಾವಳಿ ಉತ್ಸವದ ಕುರಿತು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಈ ಬಾರಿ ಡಿಸೆಂಬರ್‍ನಲ್ಲಿ ಮೂರು ದಿನಗಳ ಕಾಲ ಕಾರವಾರದಲ್ಲಿ ಕರಾವಳಿ ಉತ್ಸವ ಆಯೋಜಿಸಲಾಗುವುದು .ಡಿ.8, 9 ಹಾಗೂ 10ರಂದು ಕರಾವಳಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು, ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಕಲಾವಿದರನ್ನು ಕರೆಯಿಸಲಾಗುವುದು. ನಡೆಸಲಾಗುವುದು ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಉತ್ಸವದ ಭಾಗವಾಗಿ ಆದಿತ್ಯ ಬಿರ್ಲಾ ಕಂಪನಿಯ ಸಹಯೋಗದೊಂದಿಗೆ ಬೀಚ್ ಮ್ಯಾರಾಥಾನ್ ಅನ್ನು ಹಮ್ಮಿಕೊಳ್ಳಲಾಗುವುದು.
ಉತ್ಸವದ ಪ್ರಧಾನ ಕಾರ್ಯಕ್ರಮಗಳು ಟ್ಯಾಗೋರ್ ಬೀಚ್ ನ ಮಯೂರವರ್ಮ ವೇದಿಕೆಯಲ್ಲಿ ನಡೆಯಲಿದೆ. ಉಳಿದಂತೆ ಜಿಲ್ಲಾ ರಂಗಮಂದಿರ ಹಾಗೂ ವಾರ್ ಷಿಪ್ ಮ್ಯೂಸಿಯಂ ಬಳಿಯೂ ಕಾರ್ಯಕ್ರಮಗಳನ್ನು ಹಾಗೂ ಫಲಪುಷ್ಟ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಶಾಸಕಿ ರೂಪಾಲಿ ನಾಯ್ಕ ಇನ್ನಿತರರು ಇದ್ದರು.