ಕುಮಟಾ : ಆಧುನಿಕ ಜಗತ್ತಿನ ಒತ್ತಡದ ಸನ್ನಿವೇಶದಲ್ಲಿ ನಗು ಕಡಿಮೆಯಾಗುತ್ತಿದೆ. ಕೆಲವು ಸಮಯದ ನಗು ಅದೆಷ್ಟು ಮಾನಸಿಕ ರೋಗಗಳನ್ನು ಗುಣಪಡಿಸಲು ಸಹಕಾರಿ. ಈ ನಿಟ್ಟಿನಲ್ಲಿ ಹವ್ಯಕ ವಲಯ, ಗುಡೇಅಂಗಡಿ ಆಶ್ರಯದಲ್ಲಿ ವಿಶಿಷ್ಟ ನಗೆ ಕೂಟ ಹೊಲನಗದ್ದೆಯ ಹವ್ಯಕ ಸಭಾಭವನದಲ್ಲಿ ಆರಂಭಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಟಿ. ಎನ್ ಹೆಗಡೆ ನೆರವೇರಿಸಿ ನಗುವಿನ ಮಹತ್ವ ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ನಾಗರಾಜ ಭಟ್ ಮಾತನಾಡಿ ನಗು ಕೂಟ ದ ಪ್ರಾಮುಖ್ಯತೆ ಹಾಗೂ ವೈದ್ಯಕೀಯ ಲಾಭವನ್ನು ವಿವರಿಸಿದರು. ಖ್ಯಾತ ವೈದ್ಯರಾದ ಡಾ.ಅನಿಲ್ ಹೆಗಡೆ ತಮ್ಮ ಅನುಭವದ ನುಡಿಗಳಲ್ಲಿ ನಗುವಿನ ಪ್ರಯೋಜನ ತಿಳಿಸಿದರು.

RELATED ARTICLES  ಇಂದಿನ(ದಿ-08/04/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

IMG 20181102 WA0001
ದೈಹಿಕ ಸಲಹೆಗಾರರಾದ ಶ್ರೀ ಜಿ. ಡಿ ಭಟ್ ಪ್ರಾಯೋಗಿಕವಾಗಿ ನಗು ಕೂಟ ಹೇಗೆ ಮಾಡಬಹುದೆಂದು ತೋರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಮಾಕಾಂತ ಹೆಗಡೆ ವಹಿಸಿ ನಗುವು ಎಲ್ಲರ ಬಾಳಲ್ಲೂ ಬೆಳಕಾಗಿ ಬೆಳೆಯಲಿ ಎಂದು ಆಶಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ.ಎಮ್. ಎನ್ ಹೆಗಡೆ ನಿರ್ವಹಿಸಿದರು.

RELATED ARTICLES  ಯಶಸ್ವಿಯಾದ ಮಾನಸಿಕ ಆರೋಗ್ಯ ತಪಾಸಣೆ ಶಿಬಿರ