ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ತುಂಬೆ ಗಿಡ ಒಳ್ಳೆಯ ಉದಾಹರಣೆಯಾಗಿದೆ. ತುಂಬೆ ಗಿಡ ಇದನ್ನು ತಿಳಿಯದವರೇ ಇಲ್ಲ. ಇದು ಶಿವನಿಗೆ ಪ್ರಿಯವಾದ ಹೂವು ಎಂದು ಪರಿಗಣಿಸಲ್ಪಟ್ಟಿದೆ. ಭಾರತದಾದ್ಯಂತ ಕಂಡು ಬರುವ ಇದು ಔಷಧೀಯ ಸಸ್ಯವೂ ಹೌದು. ಸಂಸ್ಕೃತದಲ್ಲಿ ದ್ರೋಣ ಪುಷ್ಪ ಅಥವಾ ಚಿತ್ರಕ್ಷಪ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು Leucas ಅಸ್ಪೆರ.

ತುಂಬೆ ಗಿಡವನ್ನು ಸುಲಭವಾಗಿ ಗುರುತಿಸಬಹುದು. ಏಕೆಂದರೆ ಇದರ ಸುಂದರ ಬಿಳಿ ಎಲೆಗಳು, ಇವು ಎರಡನ್ನೂ ಮನೆಯ ಮದ್ದುಗಳಿಗೆ ಬಳಸಲಾಗುತ್ತದೆ.ತುಂಬೆ ಗಿಡ ಬೆಳೆಯಲು ಹೆಚ್ಚು ನೀರು ಬೇಕೆಂದಿಲ್ಲ. ಇದು ಕಂಡ ಕಂಡಲ್ಲಿ ಬೆಳೆಯುತ್ತದೆ. ಇವು ಸುಂದರವಾದ ಸಣ್ಣಬಿಳಿ ಹೂವಿನಿಂದ ಕಂಗೊಳಿಸುತ್ತದೆ.

RELATED ARTICLES  ಬೆಂಗಳೂರಿನಲ್ಲಿ BF.7 ಆತಂಕ

ಬಿಳಿ ಬಣ್ಣವನ್ನು ಹೊರತು ಪಡಿಸಿ ಸಾಮಾನ್ಯ ಎಲ್ಲಾ ಬಣ್ಣಗಳಲ್ಲಿ ಹೂವು ಬಿಡುತ್ತದೆ. ಬಿಳಿ ಬಣ್ಣದ ತುಂಬೆ ತುಂಬಾ ಶ್ರೇಷ್ಠ ಹಾಗೂ ಇದನ್ನು ಔಷಧಿಗೆ ಹೆಚ್ಚು ಬಳಸಲಾಗುತ್ತದೆ. ಇದು ಜ್ವರ ಮತ್ತು ಉರಿಯೂತವನ್ನು ತಗ್ಗಿಸುವ ಗುಣಗಳನ್ನು ಹೊಂದಿದೆ.ಇದು ಚರ್ಮದ ರೋಗಗಳಿಗೆ ಉಪಯುಕ್ತ. ಇದು ತಲೆನೋವಿಗೆ ಉತ್ತಮ ಪರಿಹಾರ ನೀಡುತ್ತದೆ. ತಲೆನೋವಿನ ಸಂದರ್ಭದಲ್ಲಿ ತುಂಬೆ ಗಿಡದ ಕಾಂಡ ಹಾಗೂ ಹೂವಿನ ಸಮೇತ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನ ಹಬೆಯನ್ನು ತೆಗೆದುಕೊಳ್ಳುವುದು ಉತ್ತಮ ಮನೆ ಮದ್ದಾಗಿದೆ.

ಇದು ಕಣ್ಣಿನ ಸುತ್ತಲೂ ಕಪ್ಪು ವರ್ತುಲ ಸಮಸ್ಯೆ ಇದ್ದಲ್ಲಿ ತುಂಬೆ ಗಿಡದ ರಸಕ್ಕೆ ಸ್ವಲ್ಪ ಹಾಲು ಸೇರಿಸಿ ಅದರಿಂದ ಮುಖ ತೊಳೆದರೆ ಕಣ್ಣೀ ಗೂ ಒಳ್ಳೇಯದು. ತುಂಬೆಗೆ ಜೀರ್ಣಶಕ್ತಿ ಹೆಚ್ಚಿಸುವ ಸಾಮರ್ಥ್ಯವಿದೆ ಹಾಗೂ ಎಲ್ಲಿಯಾದರೂ ಹಾವು ಕಡಿದಲ್ಲಿ ತುಂಬೆ ಗಿಡದ ಎಲೆಯ ರಸವನ್ನು ಹಾವು ಕಡಿದ ಜಾಗಕ್ಕೆ ಹಚ್ಚುತ್ತಾರೆ. ಇದರಿಂದ ವಿಷ ರಕ್ತದಲ್ಲಿ ಸೇರದೆ ಸಾವು ಸಂಭವಿಸುವುದರಿಂದ ಪಾರಾಗಬಹುದು ಎಂದು ಹೇಳುತ್ತಾರೆ.

RELATED ARTICLES  ಮಂಗನ ಕಾಯಿಲೆಯ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ: ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕುರಿತಾದ ಲೇಖನ.

ಇದು ಶೀತ ಹಾಗೂ ಗಂಟಲಲ್ಲಿ ಕಫ ಅತಿಯಾಗಿ ಹೊರ ಬರದೆ ಕಾಡುವ ಕಫದ ಸಮಸ್ಯೆಗೂ ಸಹಾಯ ಮಾಡುತ್ತದೆ. ಹಾಗಾಗಿ ಯಾರು ತುಂಬೆ ಹೂವಿನ ಬಳಕೆ ಮಾಡುತ್ತಾರೋ ಅದರ ಕಷಯವನ್ನು ಆಗಾಗ ಸೇವಿಸುತ್ತಾ ಇರುತ್ತಾರೋ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.