ನವದೆಹಲಿ : ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಿಗಳಿಗೆ 59 ನಿಮಿಷಗಳಲ್ಲಿ ಒಂದು ಕೋಟಿ ರೂ ವರೆಗೆ ಸಾಲ ನೀಡಬೇಕೆಂಬ ನೀತಿಯೊಂದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. ಇದು ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಗಿಫ್ಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ನಡೆದ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಹಕಾರ ಕಾರ್ಯಕ್ರಮದಲ್ಲಿ ಮೋದಿ ಈ ವಿಷಯ ಘೋಷಿಸಿದ್ದಾರೆ ಎಂದು ತಿಳದುಬಂದಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ರಫ್ತಿಗೆ ಪೂರ್ವ ಮತ್ತು ನಂತರದ ಸರಕು ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 3 ರಿಂದ ಶೇ 5 ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಇಂತಹ ಕೈಗಾರಿಕೆಗಳು ಬಡ್ಡಿದರಗಳ ಮೇಲೆ ಶೇ 2 ರಷ್ಟು ಸಬ್ಸಿಡಿ ಅಂದರೆ, 1 ಕೋಟಿ ರೂ. ಹೆಚ್ಚಳದ ಸಾಲವನ್ನು ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ. ಉದ್ಯಮಶೀಲತೆಗೆ ವಿಶೇಷ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿಯ ಗಿಫ್ಟ್ ಪ್ರಕಟಿಸಿದ್ದಾರೆ ಎನ್ನಲಾಗಿದೆ.