ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2018ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಅವರಿಗೆ ನ.4 ರಂದು ಮಧ್ಯಾಹ್ನ 3.30ಕ್ಕೆ ಪಟ್ಟಣದ ಪಿ.ಎಮ್.ಸಂಯುಕ್ತ ಪದವಿಪೂರ್ವ ಕಾಲೇಜಿನ ರೈತ ಭವನದಲ್ಲಿ ಪ್ರದಾನ ಮಾಡಲಿದೆ.

RELATED ARTICLES  ಉತ್ತರಕನ್ನಡದಲ್ಲಿ ಮತ್ತೆ ಕೊರೋನಾ ಏರಿಕೆ..!

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕಲ್ ಅವರು ಉದ್ಘಾಟನೆ ಮಾಡಲಿದ್ದು ಅಧ್ಯಕ್ಷತೆನ್ನು ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಪಿ.ಎಮ್.ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಕೇಣ ಉಪಸ್ಥಿತರಿರುವರು.

RELATED ARTICLES  ಜಿ.ಸಿ ಕಾಲೇಜಿನಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವಿಶೇಷ ರೀತಿಯಲ್ಲಿ ಗ್ರಂಥಾಲಯ ದಿನ ಆಚರಣೆ

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನಿಮಿತ್ತ ಯುವ ಬರಹಗಾರರಾದ ಉದಯ ಮಡಿವಾಳ ಕುಮಟಾ, ಶೋಭಾ ಹಿರೆಕೈ ಸಿದ್ಧಾಪುರ, ಷರೀಫ ಹಾರ್ಸಿಕಟ್ಟಾ ಮುಂಡಗೋಡ, ದತ್ತಗುರು ಕಂಠಿ ಶಿರಸಿ ಇವರಿಗೆ ಯುವ ಕೃತಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.