ಗೋಕರ್ಣ : ಸರ್ಕಾರದಿಂದ ರಾಮಚಂದ್ರಾಪುರ ಮಠಕ್ಕೆ ಮಹಾಬಲೇಶ್ವರ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ ಇಂದು ನಡೆಯಿತು.ಇದರ ಮೂಲಕ ಮತ್ತೆ ಶ್ರೀ ಗೋಕರ್ಣ ಮಹಾಬಲೇಶ್ವರ ದೇವಾಲಯವು ಶ್ರೀ ರಾಮಚಂದ್ರಾಪುರ ಮಠದ ಮಡಿಲು ಸೇರಿದೆ.
ದೇವಸ್ಥಾನದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಹಾಲಪ್ಪನವರು ಅಧಿಕೃತವಾಗಿ ಹೊಸನಗರ ರಾಮಚಂದ್ರಾಪುರ ಮಠದಿಂದ ನಿಯುಕ್ತಿಗೊಂಡಿರುವ ಜಿ.ಕೆ ಹೆಗಡೆ ರವರಿಗೆ ಕಾಗದ ಪತ್ರಗಳನ್ನು ಹಸ್ತಾಂತರಿಸಿದರು.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಕುರಿತು ನಿನ್ನೆ ಅಧಿಕೃತ ಆದೇಶವನ್ನು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ್ದರು.
ಸೆ೧೯ ರಂದು ಸರ್ಕಾರ ದೇವಸ್ಥಾನ ವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಿತ್ತು .ಅದಾದ ನಂತರ ರಾಮಚಂದ್ರಾಪುರ ಮಠವು ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ದಾವೆ ಹೂಡಿತ್ತು .ಇದರಂತೆ ಸುಪ್ರೀಂ ಕೋರ್ಟ ನ ತ್ರಿಸದಸ್ಯ ಪೀಠವು ನವಂಬರ್ 1 ರಂದು ಮಠದ ಸುಪರ್ದಿಗೆ ನೀಡಿ ದೇವಸ್ಥಾನದ ಚರ ,ಚಿರಾಸ್ತಿ ಯನ್ನು ಹಸ್ತಾಂತರಿಸುವಂತೆ ಆದೇಶದಲ್ಲಿ ಉಲ್ಲೇಖಿಸಿತ್ತು.
ಶ್ರೀ ಮಠದ ಆಡಳಿತ ಅವಧಿಯಲ್ಲಿ ಗೋಕರ್ಣ ಅಭಿವೃದ್ಧಿಯ ಉತ್ತುಂಗಕ್ಕೆ ಏರಿತ್ತು. ಇದೀಗ ಮತ್ತೆ ಶ್ರೀ ಮಠದ ಆಡಳಿತಕ್ಕೆ ಬಂದಿರುವುದು ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.