ಕುಮಟಾ :ಕುಮಟಾ ಹೊನ್ನಾವರ ಕ್ಷೇತ್ರದ ಹಾಲೀ ಶಾಸಕ ದಿನಕರ ಕೆ ಶೆಟ್ಟಿಯವರ ವಿರುದ್ಧ ಮಾಜಿ ಶಾಸಕರಾದ ಶಾರದಾ ಶೆಟ್ಟಿ ಗುಡುಗಿದ್ದಾರೆ. ತಮ್ಮ ಕುರಿತಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವ ದಿನಕರ ಶೆಟ್ಟಿಯವರ ವಿರುದ್ಧ ಹರಿ ಹಾಯ್ದ ಶಾರದಾ ಶೆಟ್ಟಿ ಮಾತಿನ ಛಾಟಿ ಬೀಸಿದ್ದಾರೆ. ಕುಮಟಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರ ವಿರುದ್ಧದ ಅಸಮಾಧಾನ ಹೊರ ಹಾಕಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಅವರ ಹೆಸರು ಹೇಳಿ ಸಿಂಪತಿ ಗಿಟ್ಟಿಸಿ ಜನರಿಂದ ಮತ ಪಡೆದರು. ನಂತರ ಪುರಸಭಾ ಚುನಾವಣೆಯಲ್ಲಿ ನಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಆದರೆ ದಿನಕರಶೆಟ್ಟಿಯವರು ಜನತೆಯನ್ನು ಹಾದಿ ತಪ್ಪಿಸಲು ಪ್ರಯತ್ನಮಾಡುತ್ತಿದ್ದಾರೆ. ಮತ ಯಂತ್ರದ ವಿಷಯ ಈಗ ನೆನಪಾಗಿದ್ದು ವಿಪರ್ಯಾಸ, ಅವರಾವುದೋ ಅಮೇರಿಕಾ ಪೇಪರ್ ಓದಿದ್ದಾರೆಯೇ ಎಂದು ಶಾರದಾ ಶೆಟ್ಟಿಯವರು ವ್ಯಂಗ್ಯ ಮಾಡಿದರು. ಈ ಹಿಂದೆಯೂ ೨೦ ಮತಗಳ ಗೆಲುವು ಸಾಧಿಸಿದ್ದಾಗ, ಆಯ್ಕೆಯಾದ ನನ್ನನ್ನು ಕೋರ್ಟ ಕಟಕಟೆಗೆ ಹತ್ತಿಸಿ ಮಾನಸಿಕವಾಗಿ ನೋವು ಮಾಡಿದ್ದಾರೆ ಎಂದು ನಾಟಕ ಮಾಡಿದ್ದ ದಿನಕರ ಶೆಟ್ಟಿ ಜನತೆಯ ಮನ ಗೆಲ್ಲಲು ಸಿಂಪತಿ ಗಿಟ್ಟಿಸುತ್ತಿದ್ದಾರೆ ಎಂದರು.
ನಾನು ಅನಾವಶ್ಯಕವಾಗಿ ಯಾವುದೇ ರೀತಿಯ ಪತ್ರಿಕಾಗೋಷ್ಠಿಗಳನ್ನು ಎಂದಿಗೂ ಕರೆದಿಲ್ಲ .ಆದರೆ ಹಾಲಿ ಶಾಸಕರು ನನ್ನ ಮೇಲೆ ಸುಖಾಸುಮ್ಮನೆ ಆರೋಪಗಳನ್ನು ಹೊರಿಸುತ್ತಿದ್ದಾರೆ .ಮತಯಂತ್ರದ ದೋಷದಿಂದಾಗಿ ದಿನಕರ ಶೆಟ್ಟಿ ಅವರು ಅತಿ ಹೆಚ್ಚಿನ ಮತವನ್ನು ಗಳಿಸುವಂತಾಯಿತು ಎಂದು ನಾನು ಹೇಳಿಕೆ ನೀಡಿದ್ದರ ಬಗ್ಗೆ ಮಾತನಾಡಿ ಉಳಿದ ಎಷ್ಟೋ ಜನ ಇ.ವಿ.ಎಂ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಆದರೆ ನಾನು ಆ ರೀತಿಯಾಗಿ ಮಾಡಿಲ್ಲ ಎಂದರು.ಈ ರೀತಿಯಾಗಿ ಹೇಳಿದ್ದು ಇರಬಹುದು ಆದರೆ ನಾನು ಅದರ ಬಗ್ಗೆ ಮುಂದುವರೆಯಲಿಲ್ಲ. ಈಗ ಶಾಸಕರು ವಿನಾಕಾರಣ ನನ್ನ ವಿರುದ್ಧ ಪತ್ರಿಕಾಗೋಷ್ಠಿಗಳನ್ನು ನಡೆಸಿ ಇಲ್ಲ ಸಲ್ಲದ ಹೇಳಿಕೆಗಳನ್ನ ನೀಡುತ್ತಾರೆ ಎಂದು ಆರೋಪಿಸಿದರು . ಧಾರೇಶ್ವರದಲ್ಲಿ ನಡೆದ ಕಾರ್ಮಿಕರ ಹೋರಾಟದ ವಿಷಯ ಪ್ರಸ್ಥಾಪಿಸಿ ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.
[youtube https://www.youtube.com/watch?v=vkRUSNslwNI&w=356&h=361]
ಈ ಹಿಂದೆ ಪತ್ರಿಕಾಗೋಷ್ಠಿಯನ್ನು ನಡೆಸಿದಂತಹ ದಿನಕರ ಶೆಟ್ಟಿ ಅವರು ಶಾರದಾ ಶೆಟ್ಟಿ ಅವರು ಕಾಮಗಾರಿಯ ವಿಷಯದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಆದರೆ ಇದು ಸತ್ಯಕ್ಕೆ ದೂರವಾದುದು .ನಾನು ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ವಿಚಾರಿಸಿದ್ದೇನೆಯೇ ಹೊರತು ಯಾವುದೇ ರೀತಿಯ ಹಸ್ತಕ್ಷೇಪವನ್ನು ಮಾಡಿಲ್ಲ . ಈ ರೀತಿಯ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಶಾಸಕರು ನೀಡುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ಹೊರ ಹಾಕಿದರು .
[youtube https://www.youtube.com/watch?v=WruVTHeBdSc&w=356&h=361]
ಇಲ್ಲಸಲ್ಲದ ಆರೋಪಗಳನ್ನು ಮಾಡುವುದರ ಮೂಲಕ ಶಾಸಕ ದಿನಕರ ಶೆಟ್ಟಿ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ ಜನತೆಯನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಂತೆ ಗೋಚರವಾಗುತ್ತದೆ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ್ ದಿನಕರ ಶೆಟ್ಟಿ ಅವರು ಶಾಸಕರಾದ ಮೇಲೆ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕುರಿತು ಚಿಂತಿಸುವುದನ್ನು ಬಿಟ್ಟು ಹೋದ ಕಡೆಯಲ್ಲೆಲ್ಲ ಅತಿ ಹೆಚ್ಚಿನ ಮತಗಳಿಸಿ ನನ್ನನ್ನು ಆರಿಸಿದ್ದಾರೆ ನಾನು ಅತಿ ಹೆಚ್ಚಿನ ಮತದಿಂದ ಜಯ ಗಳಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು .
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರವಿಕುಮಾರ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷರಾದ ಮಧುಸೂದನ್ ಶೇಟ್,ವಿನಾಯಕ ಶೆಟ್ಟಿ, ತಾರಾ ಗೌಡ, ಗಣಪತಿ ಶೆಟ್ಟಿ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು .