ಕುಮಟಾ: ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ವಾರದಲ್ಲಿ ನಾಳೆ ದಿ. 04-11-2018 ರವಿವಾರ ಪರಂಪರಾ ಕೂಟ ಮತ್ತು ದೀಪಾವಳಿ ಮೇಳ ಕಾರ್ಯಕ್ರಮಗಳು ವಿಶೇಷ ರೀತಿಯಲ್ಲಿ ಯೋಜನೆಗೊಂಡಿದೆ .

ಹಳೆ ಬೇರು ಹೊಸ ಚಿಗುರು ಶೀರ್ಷಿಕೆಯಲ್ಲಿ ಮೂಡಿಬರಲಿರುವ ಪರಂಪರಾ ಕೂಟದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಅಜ್ಜ ಅಜ್ಜಿಯಂದಿರು ವಿದ್ಯಾರ್ಥಿಗಳ ಜೊತೆ ಶೈಕ್ಷಣಿಕ ಪರಿಸರದಲ್ಲಿ ವೈವಿಧ್ಯಮ ಕಾರ್ಯಕ್ರಮದಲ್ಲಿ ಒಂದಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಬಾಂಧವ್ಯದ ಕುರಿತಾಗಿ ಚಲನಚಿತ್ರ ನಟ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಅವರು ಮಾತನಾಡಲಿದ್ದಾರೆ . ಉದ್ಯಮಿಗಳು ಹಾಗೂ ಶಿಕ್ಷಣ ಪ್ರೇಮಿಗಳಾದ ಶ್ರೀ ಜಯಂತ ಮಂಕಿಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ವಿ.ಆರ್ ನಾಯಕ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ . ಕೀರ್ತನಾ ಚತುರ ಶ್ರೀ ನಾರಾಯಣ ದಾಸರು ಶಿರಸಿ ಇವರಿಂದ ಹರಿಕಥೆ ಕಾರ್ಯಕ್ರಮ ನಡೆಯಲಿದೆ .

RELATED ARTICLES  ನೆಹರುನಗರದ ಕಾರ್ಯಕರ್ತರ ಸಭೆಯಲ್ಲಿ ದಿನಕರ ಶೆಟ್ಟಿ ಭಾಗಿ.

ಸಾಯಂಕಾಲ ನಡೆಯುವ ಕಾರ್ಯಕ್ರಮದಲ್ಲಿ ಗಾಳಿಪಟ ಪ್ರದರ್ಶನ, ದೀಪಾವಳಿ ರಂಗೋಲಿ ಹಾಗೂ ಖಾದ್ಯಗಳ ಸ್ಪರ್ಧೆಗಳು, ಯೋಧರಿಗೆ ಸನ್ಮಾನ್ಯ ,ಮಕ್ಕಳ ಸಂತೆ , ಮಾತೆಯರಿಂದ ಮಾರಾಟ ಮಳಿಗೆಗಳು , ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನರಕಾಸುರ ದಹನ ಕಾರ್ಯಕ್ರಮ ನಡೆಯಲಿದೆ. ಡಾಕ್ಟರ್ ಗೋಪಾಲಕೃಷ್ಣ ಹೆಗಡೆ ದೀಪಾವಳಿ ಸಂದೇಶವನ್ನು ನೀಡಲಿದ್ದಾರೆ .

RELATED ARTICLES  ಹದಿಹರೆಯದ ಸಮಸ್ಯೆಗಳಿಗೆ ಎದೆಗುಂದಬೇಡಿ- ಬೀರಣ್ಣ ನಾಯಕ

ವಿನೂತನ ರೀತಿಯಲ್ಲಿ ಕೊಂಕಣ ಎಜುಕೇಷನ್ ಟ್ರಸ್ಟ್ ನ ರೌಪ್ಯ ಮಹೋತ್ಸವ ವರ್ಷದ ವಿಶೇಷ ಕಾರ್ಯಕ್ರಮವಾಗಿ ಸಮೂಹ ಸಂಸ್ಥೆಗಳು ಮತ್ತು ಮಾತ್ರ ಮಂಡಳಿಯವರ ಸಂಯೋಜನೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಮೂಡಿ ಬರಲಿದ್ದು ಎಲ್ಲ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಲು ಸಂಸ್ಥೆಯವರು ವಿನಂತಿಸಿದ್ದಾರೆ.