ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಭಟ್ಕಳ ತಾಲೂಕಾ ಘಟಕದಿಂದ ಮನೆಯಂಗಳದಲ್ಲಿ ಕಾವ್ಯೋತ್ಸವ ಕಾರ್ಯಕ್ರಮವು ಆಸರಕೇರಿಯಲ್ಲಿ ನಡೆಯಿತು. ಸಾಹಿತ್ಯ ಪರಿಷತ್‍ನ ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟೇಶ ನಾಯ್ಕ ಅವರ ಮಗಳಾದ ಪೂರ್ವಿಯ 5ನೇ ವರ್ಷದ ಜನ್ಮ ದಿನವನ್ನು ಕಾವ್ಯೋತ್ಸವದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಸಾಹಿತ್ಯದ ಉದ್ದೇಶವೇ ಎಲ್ಲರ ಹಿತವನ್ನು ಬಯಸುವುದು. ಮನೆಯಂಗಳದಲ್ಲಿ ಕಾವ್ಯೋತ್ಸವದ ಮೂಲಕ ಸಾಹಿತ್ಯ ಪ್ರಿಯರೆಲ್ಲರೂ ಒಂದೆಡೆ ಸೇರುವ ಮೂಲಕ ಕಾವ್ಯ ಕವನಗಳನ್ನು ಹಂಚಿಕೊಂಡು ರಸನಿಮಿಷಗಳನ್ನು ಕಳೆಯಲು ಸಹಕಾರಿ ಎಂದು ನುಡಿದರಲ್ಲದೇ ಸಾಹಿತ್ಯ ಮತ್ತು ಸಾಹಿತ್ಯಪರಿಷತ್ತಿನಡೆಗೆ ಜನರನ್ನು ತರುವ ಉದ್ದೇಶದಿಂದ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನುಡಿದು ತಮ್ಮ ಕವನ ವಾಚಿಸಿದರು. ಕವಿಗೋಷ್ಠಿಯಲ್ಲಿ ಸಾಹಿತಿ ಹಾಗೂ ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಪ್ರಾಸ್ಥಾವಿಕ ನುಡಿಗಳನ್ನಾಡಿ ತಮ್ಮ ಕವನ ವಾಚಿಸಿದರು.

RELATED ARTICLES  ಯಕ್ಷನಾದ ಲೀನ ಚಿಟ್ಟಾಣಿಯವರಿಗೆ ಭಾವಪೂರ್ಣ ನುಡಿ ನಮನ

ಕಸಾಪ ಗೌರವ ಕಾರ್ಯದರ್ಶಿ ಎಮ್.ಪಿ.ಬಂಢಾರಿ, ಶಿಕ್ಷಕ ಸಾಹಿತಿ ಸುರೇಶ ಮುರ್ಡೇಶ್ವರ, ಚಂದ್ರಪ್ರಭಾ ಕೊಡಿಯಾ ತಮ್ಮ ಕವಿತೆ ವಾಚಿಸಿದರು ವೆಂಕಟೇಶ ನಾಯ್ಕ ಆಸರಕೇರಿ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪುರಸಭೆಯ ಅಧಿಕಾರಿ ಸೋಜಿಯಾ ಸುಮನ್, ಎಮ್.ಎಸ್.ನಾಯ್ಕ, ಗಣಪತಿ ನಾಯ್ಕ, ಶಿಕ್ಷಕ ಆರ್.ಎಸ್.ನಾಯ್ಕ, ಮತ್ತು ಕುಟುಂಬದವರು ಉಪಸ್ಥಿತರಿದ್ದರು.

RELATED ARTICLES  ಬಿಜೆಪಿ ಅಭ್ಯರ್ಥಿ ಪರ‌ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸುಬ್ರಹ್ಮಣ್ಯ ‌ಶಾಸ್ತ್ರಿ