ಹೊನ್ನಾವರ: ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪ.ಪೂ. ಮಹಾವಿದ್ಯಾಲಯದಲ್ಲಿ 3ನೇಯ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯು ಸಂಪನ್ನಗೊಂಡಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಪ್ರವೀಣಜಿ.ಎನ್, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಹಿರೇಬೈಲ್ ಇವರು ಆಯುರ್ವೇದ ಶಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಆಯುರ್ವೇದ ಶಾಸ್ತ್ರದಮೂಲ ತತ್ವ 3 ಶಾರೀರಿಕಕಾರ್ಯಕ್ಷಮತೆ, ತ್ರಿಜನ್ಯದೋಷ ಮತ್ತು ಪರಿಹಾರ ಸೂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ದರ್ಶಕದ ಮೂಲಕ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯರಾದ ಡಾ.ರಾಜು ಮಾಳಗಿಮನಿಯವರು ಅವರ ಉತ್ತಮ ಆರೋಗ್ಯಕ್ಕೆ 6 ಸೂತ್ರಗಳನ್ನು ವಿವರಿಸಿದರು.
ಉಪನ್ಯಾಸಕರಾದ ಶ್ರೀ.ಪ್ರಸಾದಎಸ್.ಜಿ. ಇವರುಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀ ವಿನಾಯಕ ಭಟ್ಟ ಇವರು ಗಣ್ಯರನ್ನು ವಂದಿಸಿದರು.