ಶಿರಸಿ:ಕಷ್ಟ ಬಂದಾಗ ದೇವರಲ್ಲಿ ಮೊರೆ ಇಡೋದು ಅಥವಾ ಹರಕೆ ಹೊರೋದು ಕಾಮನ್, ಅದೂ ಅಲ್ಲದೇ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಜನ ಪ್ರಾರ್ಥನೆ ಮಾಡ್ತಾರೆ, ಹರಕೆ ಪೂಜೆ ಸಲ್ಲಿಸ್ತಾರೆ. ಆದರೆ ಶಿರಸಿಯ ಮಾರಿಕಾಂಬೆಗೆ ನರೇಂದ್ರ ಮೋದಿಯವರ ಹೆಸರಿನಲ್ಲಿ ಪುಷ್ಪಾಲಂಕಾರ ಸೇವೆಯನ್ನು ನಡೆಸಲಾಯಿತು.

ಚಚಸ

ದೇಶದ ಪ್ರಧಾನಿ ನರೇಂದ್ರ ಮೋದಿ ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಮತ್ತೊಮ್ಮೆ ಗೆದ್ದು ಭವ್ಯ ಭಾರತದ ಆಡಳಿತದ ಚುಕ್ಕಾಣಿಯನ್ನು ಮತ್ತೆ ಹಿಡಿಯುವಂತಾಗಲಿ ಮತ್ತು ಅವರಿಗೆ ಪರಮಾತ್ಮನು ಆರೋಗ್ಯವನ್ನು ನೀಡಿ ಕಾಪಾಡಲಿ ಎಂದು ಪ್ರಾರ್ಥಿಸಿ ಇಂದು ಶಕ್ತಿ ದೇವತೆಯಾದ ಶ್ರೀ ಮಾರಿಕಾಂಬಾ ದೇವರ ಸನ್ನಿಧಿಯಲ್ಲಿ ಶ್ರೀದೇವಿಗೆ ಪುಷ್ಪಾಲಂಕಾರ ಸೇವೆಯನ್ನು ನಡೆಸಲಾಯಿತು.

RELATED ARTICLES  ಬೈಕ್ ಹಾಗೂ ಲಾರಿ ನಡುವೆ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು.

ಮಾನ್ಯ ಪ್ರಧಾನಿಯವರ ಜನ್ಮ ನಕ್ಷತ್ರವಾದ ಅನುರಾಧಾ, ವೃಶ್ಚಿಕ ರಾಶಿಯ ಶ್ರೀ ನರೇಂದ್ರ ಮೋದಿ ನಮೋ ಭಾರತ ಈ ಹೆಸರಿನಲ್ಲಿ ನಮೋ ಭಾರತ ತಂಡದ ಸದಸ್ಯರುಗಳು ಈ ಸೇವೆ ಸಲ್ಲಿಸಿದರು. ಈ ವೇಳೆ ಸುಬ್ರಮಣ್ಯ ಭಟ್ಟ ಹುತ್ಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES  ಶಿರಸಿಯಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ: ವಶವಾಯ್ತು ಸಾವಿರಾರು ರೂಪಾಯಿ