ಕುಮಟಾ: ಸ್ವಸ್ತಿ ಪ್ರಕಾಶನ ಐದನೇ ಸಾಹಿತ್ಯ ಸಂತೆಯ ನಿಮಿತ್ತ ಒಂದು ದಿನದ ಕರಕುಶಲ ವಸ್ತುಗಳ ಹಾಗೂ ಕಲಾ ಪ್ರದರ್ಶನ ಮತ್ತು ಮಾರಾಟ ಕುಮಟಾದಲ್ಲಿ ಏರ್ಪಡಿಸಲು ನಿರ್ಣಯಿಸಿದ್ದು , ವಿಶೇಷ ಪ್ರತಿಭೆಯುಳ್ಳ ಕಲಾವಿದರನ್ನು ಗುರುತಿಸುವ ಹಾಗೂ ಗೌರವಿಸುವ ಪ್ರಯತ್ನವಿದು. ಹದಿನೈದು ಜನ ಕಲಾವಿದರಿಗೆ ಮಾತ್ರ ಅವಕಾಶವಿದ್ದು ಕಲಾವಿದರು ತಮ್ಮ ಕಲಾಕೃತಿಯ ಮಾಹಿತಿಯೊಂದಿಗೆ ” ಸ್ವಸ್ತಿ ಪ್ರಕಾಶನ” ಕುಮಟಾ ಇವರನ್ನು ಸಂಪರ್ಕಿಸಬಹುದು. ಮೊದಲು ಸಂಪರ್ಕಿಸಿದ ೧೫ ಜನ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು.

RELATED ARTICLES  ಇಬ್ಬರು ನಿವೃತ್ತ ಶಿಕ್ಷಕರ ವೇತನ ವಿಚಾರ : ಶಾಸಕರಿಂದ ತ್ವರಿತ ಸ್ಪಂದನೆಗೆ ಮೆಚ್ಚುಗೆ.

ವಿಶೇಷ ಸೂಚನೆ:

ಕೈಯಿಂದ ತಯಾರಿಸಿದ ಕರಕುಶಲ ವಸ್ತುಗಳು ಅಥವಾ ಕಲಾಕೃತಿಗಳು ಆಗಿರಬೇಕು (Handy Crafts).

“ಸ್ವಸ್ತಿ ಪ್ರಕಾಶನ” ದ ತೀರ್ಮಾನವೇ ಅಂತಿಮ.

ತಿಂಡಿ ತಿನಿಸುಗಳ ಪ್ರದರ್ಶನ ಕ್ಕೆ ಅವಕಾಶವಿಲ್ಲ.

ಪ್ರವೇಶ ಶುಲ್ಕ ಇರುವುದಿಲ್ಲ.

RELATED ARTICLES  ‘ಕರ್ಕಿ ಗ್ರಾಮದ ಅಸ್ತಿತ್ವಕ್ಕಾಗಿ ಹೋರಾಟ’ ಡಿಸೆಂಬರ್ 23 ಕ್ಕೆ

ಪ್ರದರ್ಶನ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ಇದ್ದು
ಕಾರ್ಯಕ್ರಮದ ನಿಗದಿತ ದಿನಾಂಕವನ್ನು ಅತಿ ಶೀಘ್ರದಲ್ಲಿ ತಿಳಿಸಲಾಗುವುದು. (ಕಾರ್ಯಕ್ರಮ ಡಿಸೆಂಬರ್ ಎರಡನೇವಾರದ ಒಳಗಡೆ ಕುಮಟಾದಲ್ಲಿ ನಡೆಯುತ್ತದೆ).

ಕಲಾವಿದರು ತಮ್ಮ ಕಲಾಕೃತಿ ಮಾಹಿತಿಗಳೊಂದಿಗೆ ನಮ್ಮನ್ನು ಸಂಪರ್ಕಿಸಲು ಕೊನೆಯ ದಿನಾಂಕ ಇಪ್ಪತ್ತು ನವೆಂಬರ್ ೨೦೧೮.

ಸಂಪರ್ಕಿಸುವ ಸಂಖ್ಯೆ
9483617879
[email protected]