ಅಂಕೋಲಾ:ಅಂಕೋಲಾದಲ್ಲಿ ಅದ್ದೂರಿಯಾಗಿ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸುಮಾರು ಎರಡುವರೆ ಗಂಟೆಗಳ ಕಾಲ ಇದ್ದ ಮಾನ್ಯ ಜಿಲ್ಲಾಧಿಕಾರಿ ಶ್ರೀ ಎಸ್ ಎಸ್ ನಕುಲ್ ಅವರು ಜಿಲ್ಲಾ ಕಸಾಪಕ್ಕೆ ಮುಂದಿನ ದಿನದಲ್ಲಿ ಎಲ್ಲ ನೆರವು ನೀಡುವ ಭರವಸೆ ನೀಡಿದರು. ಸುಮಾರು ೨೦೦ ಕ್ಕೂ ಅದಿಕ ಸಂಖ್ಯೆಯ ಸಹೃದಯರು ಸಮಾರಂಭದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.
ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಶಾಂತಾರಾಮ ನಾಯಕ ಹಿಚ್ಕಡ್, ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಪಿ.ಎಂ.ಕಾಲೇಜು ಪ್ರಾನ್ಸುಪಾಲ ರವೀಂದ್ರ ಕೇಣಿ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ, ಗೋಪಾಲ ನಾಯ್ಕ, ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ ನಾಯಕ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ಯಲ್ಲಾಪುರ, ನಾಗರಾಜ ಹರಪನಹಳ್ಳಿ ಕಾರವಾರ, ಶ್ರೀಧರ ಗೌಡ ಕುಮಟ, ನಾಗರಾಜ ನಾಯ್ಕ ಸಿದ್ದಾಪುರ ಹಾಜರಿದ್ದರು.