ಹಿಂದೆಲ್ಲ ಎತ್ತುಗಳಿಲ್ಲದೆ ಹೊಲದ ಉಳುಮೆ ಮಾಡಲು ಸಾಧ್ಯವಿರಲಿಲ್ಲ. ಗೋವು ಎಲ್ಲ ರೀತಿಯಿಂದಲೂ ಕೃಷಿಯ ಅವಿಭಾಜ್ಯ ಅಂಗವಾಗಿತ್ತು. ಆದರೆ ಕೃಷಿಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ಆದಂತೆಲ್ಲ್ಲ ಒಂದೊಂದೇ ಕಡೆಯಿಂದ ಗೋವು ಮಾಯವಾಗತೊಡಗಿತು. ಇಂದು ಎತ್ತಿನಗಾಡಿಯಾಗಲಿ ಎತ್ತಿನ ಉಳುಮೆಯಾಗಲಿ ಕಂಡುಬರುವುದು ತುಂಬ ವಿರಳ. ಆದರೆ ಇಂದಿಗೂ ಅಲ್ಲಲ್ಲಿ ಎತ್ತುಗಳನ್ನು ಸಾಕುವವರು ಇದ್ದೇ ಇದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಎತ್ತುಗಳನ್ನು ಸಿಂಗರಿಸಿ ಅದನ್ನು ಪೂಜಿಸುವುದು ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇರುವ ಆಚರಣೆ.

ಇದು ಸ್ಮಾರ್ಟ್‌ಫೋನ್ ಯುಗ. ಈ ಸಂದರ್ಭದಲ್ಲಿ ಪ್ರತಿಯೊಂದು ಸಂಭ್ರಮಕ್ಕೆ ಫೋಟೋಗಳೇ ಸಾಕ್ಷಿ ಎಂಬಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಂದು ಸಂಭ್ರಮದ ಸಂದರ್ಭದಲ್ಲೂ ಫೋಟೋ ಇದ್ದರೇನೇ ಅದು ಅಧಿಕೃತ ಸಂಭ್ರಮ ಎಂದುಕೊಳ್ಳಲಾಗುತ್ತಿದೆ.

ಹೀಗಾಗಿ ಅದೇ ಮಾರ್ಗದ ಮೂಲಕ ನಮ್ಮ ಹಳ್ಳಿಗಳ ಸೊಬಗನ್ನು ಯುವಜನತೆಗೆ – ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿರುವ ಯುವಜನತೆಗೆ – ಪರಿಚಸುವ ಉದ್ದೇಶದಿಂದ `ಕನೆಕ್ಟ್ ಫಾರ್ಮರ್ ಡಾಟ್ ಕಾಮ್’ ವತಿಯಿಂದ ಆನ್‌ಲೈನ್ ಸೆಲ್ಫಿಸ್ಪರ್ಧೆಯನ್ನು ಆಯೋಜಿಸಲಾಗಿದೆ. *ದಿ. ಕೃಷ್ಣ ವೆಂಕಟ್ರಮಣ ಹೆಗಡೆ ಉಳ್ಳಾನೆ ಅವರ ಸ್ಮರಣಾರ್ಥ* ಈ ಬಾರಿಯ ದೀಪಾವಳಿಯಲ್ಲಿ `ಚೌಲದೆತ್ತಿನೊಂದಿಗೆ ಸೆಲ್ಫಿ’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

RELATED ARTICLES  ರಾಜ್ಯ ಅಬಕಾರಿ ಇಲಾಖೆಯಲ್ಲಿ ಉಪ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸ್ಪರ್ಧೆಯ ಸ್ಪರೂಪ

`ಕನೆಕ್ಟ್ ಫಾರ್ಮರ್ ಡಾಟ್ ಕಾಮ್’ನ ಫೇಸ್‌ಬುಕ್ ಪೇಜ್‌ನಲ್ಲಿ https://facebook.com/ConnectFarmer ಈ ಆನ್‌ಲೈನ್ ಸ್ಪರ್ಧೆ ನಡೆಸಲಾಗುತ್ತದೆ. ಸ್ಪರ್ಧಿಗಳು ದೀಪಾವಳಿ ಹಬ್ಬದ ನಂತರ .

12 ನೇಯ ರೊಳಗಾಗಿ ತಮ್ಮ ಮನೆಯ ಸಿಂಗರಿಸಿದ ಎತ್ತಿನೊಂದಿಗೆ ಒಂದು ಸೆಲ್ಫಿಯನ್ನು ತೆಗೆದು ಅದನ್ನು ನಮ್ಮ ಇಮೇಲ್ ( [email protected] ) ವಿಳಾಸಕ್ಕೆ 2018ರ ನವೆಂಬರ್ 12ರೊಳಗಾಗಿ ಕಳುಹಿಸಬೇಕು. ಆ ಎಲ್ಲ ಫೋಟೋಗಳನ್ನು 2018ರ ನವೆಂಬರ್ 13ರಿಂದ 20ರ ತನಕ ಕನೆಕ್ಟ್ ಫಾರ್ಮರ್ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಒಂದು ವಾರದ ಅವಽಯಲ್ಲಿ ಯಾವ ಪೋಟೋಕ್ಕೆ ಜನ ಲೈಕ್ ಮೂಲಕ ಹೆಚ್ಚಿನ ಮತ ನೀಡಿದ್ದರೋ ಅಂತಹ ಫೋಟೋವನ್ನು ಕಳಿಸಿದವರಿಗೆ ಕನೆಕ್ಟ್ ಫಾರ್ಮರ್ ವತಿಯಿಂದ ಬಹುಮಾನವಾಗಿ *ಒಂದು ಸರ್ಟಿಫಿಕೇಟ್, ಸ್ಮರಣಿಕೆ ಹಾಗೂ ಕನೆಕ್ಟ್ ಫಾರ್ಮರ್ ಟಿ-ಶರ್ಟ್* ನೀಡಲಾಗುತ್ತದೆ. ಎರಡು ಮತ್ತು ಮೂರನೆಯ ಸ್ಥಾನ ಗಳಿಸಿದ ಸ್ಪರ್ಧಿಗಳಿಗೆ ಸರ್ಟಿಫಿಕೇಟ್ ಕಳಿಸಿಕೊಡಲಾಗುತ್ತದೆ.

RELATED ARTICLES  ಕೊಂಕಣಿ ಕಲಾವಿದರು/ ಸಾಹಿತಿಗಳಿಗೆ ಆರ್ಥಿಕ ಸಹಾಯ.

*ಸ್ಪರ್ಧೆಯ ನಿಯಮಗಳು*

1) ದೀಪಾವಳಿಯಲ್ಲಿ ಸಿಂಗರಿಸಿದ ತಮ್ಮ ಮನೆಯ ಎತ್ತಿನೊಂದಿಗೆ ಒಂದು ಚಂದದ ಸೆಲ್ಫಿಯನ್ನು ತೆಗೆಯಬೇಕು (ಜಾಗ್ರತೆ ಎತ್ತು ಗುಮ್ಮಿ ಬಿಟ್ಟಾತು )

2) 12 ನವೆಂಬರ್ 2018ರೊಳಗಾಗಿ ಕನೆಕ್ಟ್ ಫಾರ್ಮರ್ ಫೇಸ್‌ಬುಕ್ ಪೇಜ್‌ಗೆ ಮೆಸೇಜ್ ಅಥವಾ ಇಮೇಲ್ ಮೂಲಕ ಫೋಟೋ ಕಳುಹಿಸಬೇಕು.

3) ಫೋಟೋದೊಂದಿಗೆ ಪ್ರತ್ಯೇಕವಾಗಿ ಪೂರ್ಣ ವಿಳಾಸ ಮತ್ತು ಮೊಬೈಲ್ ನಂಬರ್ ಇರಲಿ.

4) ಸ್ಪರ್ಧೆಯಲ್ಲಿ ಸೆಲ್ಫಿಯನ್ನು ಮಾತ್ರ ಪರಿಗಣಿಸಲಾಗುತ್ತದೆ.