ದೆಹಲಿ : ಗ್ರಾಮೀಣ ಪ್ರದೇಶದಲ್ಲಿ ಎಲ್ ಪಿಜಿ ಸಂಪರ್ಕ ವೃದ್ಧಿಸುವ ನಿಟ್ಟಿನಲ್ಲಿ ಇಂಧನ ಮಾರಾಟ ಮಾಡುವ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಮಹತ್ವದ ತೀರ್ಮಾನ ಕೈಗೊಂಡಿವೆ ಎಂದು ವರದಿಯಾಗಿದೆ.
ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಲು ಮತ್ತು ರೀಫಿಲಿಂಗ್ ಗೆ ಒಂದು ಸೇವಾ ಕೇಂದ್ರಗಳನ್ನು ಬಳಸಲು ಇಂಧನ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ತಿಳಿದುಬಂದಿದೆ. ದೇಶದಲ್ಲಿ ಮೂರು ಲಕ್ಷ ಕಾಮನ್ ಸರ್ವಿಸ್ ಸೆಂಟರ್ ಮೂಲಕ ಎಲ್ ಪಿಜಿ ಸೇವೆಯನ್ನು ಗ್ರಾಹಕರಿಗೆ ತಲುಪಿಸುವ ಒಪ್ಪಂದವಾಗಿದೆ.
ಈಒಪ್ಪಂದದ ಪ್ರಕಾರ ಗ್ರಾಮೀಣ ಮಟ್ಟದ ಪ್ರತಿನಿಧಿಯು, ಈ ಸೇವಾ ಕೇಂದ್ರದ ನಿರ್ವಹಣೆ ಮಾಡಲಿದ್ದಾರೆ. ಹೊಸ ಎಲ್ ಪಿಜಿ ಸಂಪರ್ಕಕ್ಕೆ 20 ರೂಪಾಯಿ, ರೀ ಫಿಲ್ಲಿಂಗ್ ಗೆ 2 ರೂ. ಸಿಎಸ್ ಸಿ ವ್ಯಾಪ್ತಿಯಲ್ಲಿ ಸಿಲಿಂಡರ್ ಗಳ ವಿತರಣೆಗೆ 10 ರೂ.ಗಳನ್ನು ಪಡೆಯಲಿದ್ದಾರೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.