ಕುಮಟಾ: ತಾಯಿಯ ಗರ್ಭದಿಂದ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಮರಣ ಹೊಂದಲೇಬೇಕಾಗುತ್ತದೆ.
ಜನನ ಆಕಸ್ಮಿಕ,ಮರಣ ಅನಿವಾರ್ಯ. ಸರಳ- ಸುಂದರವಾದ ಬದುಕನ್ನು ನಡೆಸಿ ಉತ್ತಮ ಸಮಾಜ ಜೀವಿಯಾಗಿ ಬದುಕನ್ನು ಸಾಗಿಸಿದಾಗ ವ್ಯಕ್ತಿಯ ಮರಣಾನಂತರವೂ ಅವರ ಹೆಸರು ಜನಮಾನಸದಲ್ಲಿ ಜೀವಂತವಾಗಿರುತ್ತದೆ ಎನ್ನುವುದಕ್ಕೆ ದಿ. ಪಿ.ಎನ್.ಹೆಗಡೆಯವರೇ ಸಾಕ್ಷಿ.
ಬದುಕಿನುದ್ದಕ್ಕೂ ಜನರೊಡನೆ ಪ್ರೀತಿ, ವಿಶ್ವಾಸ,ಗೌರವದಿಂದ ಬಾಳಿ ಬದುಕಿದ ಪಿ.ಎನ್.ಹೆಗಡೆಯವರ ಜೀವನ ಸಾರ್ಥಕವಾಯಿತು ಎಂದು ಜಯದೇವ ಬಳಗಂಡಿ ಯವರು ನುಡಿ ನಮನ ಸಲ್ಲಿಸಿದರು.ಅವರಿಂದು ಕುಮಟಾದ ‘ವಿವೇಕ ನಗರ ವಿಕಾಸ ಸಂಘ’ದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ದಿವಂಗತರಿಗೆ ಶೃದ್ಧಾಂಜಲಿ ಸಲ್ಲಿಸುತ್ತ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಎಮ್.ಆರ್.ನಾಯಕ ರವರು ಪೂಜ್ಯರ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ಮಾಲಾರ್ಪಣೆ ಮಾಡಿದರು.
ದಿವಂಗತರ ಸ್ಮರಣಾರ್ಥವಾಗಿ ಸಭೆಯಲ್ಲಿ ಒಂದುನಿಮಿಷದ ಮೌನಾಚರಣೆಯನ್ನು ನಡೆಸಲಾಯಿತು.
ಉಪಾಧ್ಯಕ್ಷ ಎಸ್.ಆಯ್.ನಾಯ್ಕ ,
ಕಾರ್ಯದರ್ಶಿ ದತ್ತಾತ್ರೇಯ ಭಟ್ಟ ,ಖಜಾಂಚಿ ವಿಷ್ಣು ಹೊಸಕಟ್ಟಾ,ಸಹ ಕಾರ್ಯದರ್ಶಿ ಕೆ.ಎಸ್. ಭಟ್ಟ ,ಸದಸ್ಯರುಗಳಾದ ಆರ್.ಎನ್. ಪಟಗಾರ,ಎಂ.ವಿ. ಹೆಬ್ಬಾರ್, ಮಾಧವ ಕಾಗಲ್,ಮಂಜುನಾಥ ಗೌಡ,ತಿಮ್ಮಪ್ಪ ಮುಕ್ರಿ,ಡಾ.ದಯಾನಂದ ಭಟ್ಟ ಮುಂತಾದವರು ಉಪಸ್ಥಿತರಿದ್ದು ಶೃದ್ಧಾಂಜಲಿ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.