ಕನ್ನಡ ನನಗೆ ಬದುಕನ್ನುಕೊಟ್ಟ ಭಾಷೆಎಂದು ಭಟ್ಕಳ ಎಜುಕೇಶನ್‍ಟ್ರಸ್ಟನಅಧ್ಯಕ್ಷಡಾ.ಸುರೇಶ ನಾಯಕ ನುಡಿದರು. ಅವರುಜ್ಞಾನಶ್ವರಿ ಶಿಕ್ಷಣ ಮಹಾವಿದ್ಯಾಲಯದ ಭಾಷಾ ಸಂಘ ಹಾಗೂ ತಾಲೂಕಾಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದರಾಜ್ಯೋತ್ಸವದ ಸಂಭ್ರಮಾಚರಣೆಯಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕನ್ನಡ ನಮ್ಮತಾಯಿ ನೆಲದ ಭಾಷೆ. ಈ ಭಾಷೆಯ ಬಗೆಗಿನ ಅಭಿಮಾನವು ಸದಾ ನಮ್ಮಲ್ಲಿಇರಬೇಕೆಂದರಲ್ಲದೇತಮ್ಮ ವೈದ್ಯಕೀಯ ಶಿಕ್ಷಣಕ್ಕೆ ದಾಖಲಾತಿ ಪಡೆಯಲುತಾನು ಹತ್ತನೇತರಗತಿಯ ವರೆಗಿನಕನ್ನಡ ಮಾಧ್ಯಮದ ಶಿಕ್ಷಣವೇ ಕಾರಣವಾದ ಸಂಗತಿಯನ್ನುಅಭಿಮಾನದಿಂದ ಹೇಳಿಕೊಂಡರಲ್ಲದೇ ಈ ಬಾರಿಯತಾಲೂಕಾ ಆಡಳಿತದಿಂದ ನಡೆದರಾಜ್ಯೋತ್ಸವದಲ್ಲಿ ಭಟ್ಕಳ ಎಜುಕೇಶನ್‍ಟ್ರಸ್ಟ ಪರಿವಾರದ ಮೂವರು ಸಾಧಕರು ಪ್ರಶಸ್ತಿ ಪುರಸ್ಕøತರಾಗಿರುವುದುಅಭಿಮಾನ ಹಾಗೂ ಹೆಮ್ಮೆಯ ವಿಷಯಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯಡಾ.ಆರ್. ನರಸಿಂಹ ಮೂರ್ತಿಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿ ಕನ್ನಡರಾಜ್ಯೋತ್ಸವ ಅನೇಕ ಕಡೆಗಳಲ್ಲಿ ಹಂಚಿಹೋಗಿದ್ದಎಲ್ಲಕನ್ನಡಿಗರನ್ನು ಒಂದುಗೂಡಿಸಿದ ಸುದಿನ. ನಮ್ಮ ನಾಡು ನುಡಿ ಪರಂಪರೆಯನ್ನು ಭಾವಿ ಶಿಕ್ಷಕರು ಅರಿತುಅದನ್ನು ಮುಂದಿನ ಪೀಳಿಗೆಗೆ ದಾಟಿಸುವಂತಹಜವಾಬ್ಧಾರಿಯನ್ನುತಮ್ಮÀ ವೃತ್ತಿಜೀವನದಲ್ಲಿ ಮಾಡಬೇಕೆಂದುಕರೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ತಾಲೂಕಾಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷಗಂಗಾಧರ ನಾಯ್ಕ ಮಾತನಾಡಿ ನಾಡು ನುಡಿಯ ಬಗೆಗಿನ ನಮ್ಮಅಭಿಮಾನ ಕೇವಲ ನವೆಂಬರ ಮಾಸಕ್ಕೆ ಮೀಸಲಾಗಿರದೆ ಪ್ರತಿದಿನವೂ ಜಾಗ್ರತವಾಗಿರಬೇಕು. ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ ಪ್ರಯತ್ನಿಸುವ ಮನೋಭಾವ ಸದಾಜಾಗೃತವಾಗಿದ್ದಾಗ ಮಾತ್ರರಾಜ್ಯೋತ್ಸವವು ನಿತ್ಯೋತ್ಸವವಾಗಲು ಸಾಧ್ಯಎಂದು ನುಡಿದರು. ಕಾರ್ಯಕ್ರಮದಲ್ಲ ತಾಲೂಕಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಭಟ್ಕಳ ಎಜುಕೇಶನಟ್ರಸ್ಟ ನ ಅಂಗಸಂಸ್ಥೆಗಳಾದ ನ್ಯೂಇಂಗ್ಲೀಷ್ ಶಾಲೆಯ ಮುಖ್ಯಾಧ್ಯಾಪಕ ಎಂ.ಕೆ.ನಾಯ್ಕ, ದಿ ನ್ಯೂಇಂಗ್ಲೀಷ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ.
ಸಂಗೀತಕ್ಷೇತ್ರದಲ್ಲಿಪುರಸ್ಕøತರಾದ ಪಲ್ಲವಿ ನಾಯಕ ಇವರುಗಳನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿಕನ್ನಡ ನಾಡು ನುಡಿಯ ಕಾರ್ಯಕ್ರಮಗಳ ಸಂಘಟನೆಗೆ ಸದಾ ಬೆಂಬಲ ನೀಡುವಕನ್ನಡ ಪ್ರೀತಿಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿಕಾಲೇಜಿನ ಪ್ರಾಚಾರ್ಯಡಾ. ನರಸಿಂಹ ಮೂರ್ತಿಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಎಮ್.ಕೆ.ನಾಯ್ಕ ಮಾತನಾಡಿದರೆ ಪಲ್ಲವಿ ನಾಯಕಕನ್ನಡದ ಭಾವಗೀತೆಯೊಂದನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ನಾಗರತ್ನಾ ಸಂಗಡಿಗರು ನಾಡಗೀತೆ ಹಾಡಿದರು. ಪ್ರಶಿಕ್ಷಣಾರ್ಥಿಗಳಾದ ಕು.ಚಂದ್ರಪ್ರಭಾಕೊಡಿಯಾ ಅಶ್ವಿನಿ ಶ್ರೀಧರ ನಾಯ್ಕ ನಿರೂಪಿಸಿದರೆ ಸಿಂಧು ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿಕಾಲೇಜಿನಉಪನ್ಯಾಸಕ ವೃಂದದವರು ಹಾಗೂ ಭಾಷಾಸಂಘದ ಪ್ರತಿನಿಧಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.