ಕುಮಟಾ : ಮೋದಿ ಸರಕಾರದ ಅತ್ಯಂತ ಮಹತ್ವಪೂರ್ಣವಾದ ಯೋಜನೆಗಳಲ್ಲಿ ‘ಜನರಿಕ್ ಜನೌಷಧಿ’ ಯೋಜನೆಯೂ ಒಂದು. ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಜನೌಷಧಿ ಯೋಜನೆಯಿಂದಾಗಿ ಉತ್ತಮ ಗುಣಮಟ್ಟದ ಔಷಧಿಗಳು ಬಡವರಿಗೆ ಕೈಗೆಟಕುವ ದರದಲ್ಲಿ ದೊರಕುತ್ತಿದ್ದು ಇದಕ್ಕಾಗಿ ದೇಶದಾದ್ಯಂತ ಮೋದಿ ಸರಕಾರ ಸಾವಿರಾರು ಜನೌಷಧ ಮಳಿಗೆಗಳನ್ನು ತೆರೆದಿದೆ. ಇಂದು ಕುಮಟಾ ತಾಲೂಕಿನಲ್ಲಿಯೂ ಈ ಮಳಿಗೆ ಪ್ರಾರಂಭಗೊಂಡಿದೆ.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಹಲವು ತಾಲ್ಲೂಕು ಕೇಂದ್ರ ಗಳಲ್ಲಿಯೂ ಆರಂಭವಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಭಾರತೀಯ ಜನರಿಕ್ ಕೇಂದ್ರ’ವು ಈ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ಅನೇಕ ಕಡೆ ಮಳಿಗೆಗಳನ್ನು ಆರಂಭಿಸಿದೆ. ಈಗ ಮಾರುಕಟ್ಟೆಯಲ್ಲಿ ಇರುವ ವಿವಿಧ ಔಷಧಿ ಅಂಗಡಿಗಳಿಗೆ ಹೋಲಿಸಿದರೆ ಈ ಜನೌಷಧಿ ಮಳಿಗೆಗಳಲ್ಲಿ ಸಿಗುವ ಜೀವನಾಶ್ಯಕ ಔಷಧಿಗಳು ಶೇ.90ರ ದರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ.

RELATED ARTICLES  ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ.

ನಿಧಾನವಾಗಿ ಈ ಜನೌಷಧಿ ಮಳಿಗೆಗಳು ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಜನಪ್ರಿಯವಾಗುತ್ತಿವೆ. ಸಣ್ಣಪುಟ್ಟ ರೋಗರುಜಿನಗಳಿಗೂ ಜನಸಾಮಾನ್ಯರು ವೈದ್ಯರ ಬಳಿಗೆ ಹೋದರೆ ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಯನ್ನು ಬರೆದುಕೊಡುತ್ತಾರೆ. ಇದರಲ್ಲಿ ವೈದ್ಯರು ಮತ್ತು ಔಷಧಿ ಕಂಪೆನಿಗಳ ನಂಟು ಕೂಡಾ ಪ್ರಭಾವ ಬೀರುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಧಾನಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ ಆನಂತರ ಆದೇಶವೊಂದನ್ನು ಹೊರಡಿಸಿ ಇನ್ನು ಮುಂದೆ ವೈದ್ಯರು ರೋಗಿಗಳಿಗೆ ಜನರಿಕ್ ಔಷಧಿಯನ್ನೇ ಬರೆದುಕೊಡಬೇಕೆಂದು ಸರ್ಕಾರ ತಿಳಿಸಿತ್ತು. ಈಗ ಎಲ್ಲೆಡೆ ಈ ಯೋಜನೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ..
ಅದರಂತೆ ಕುಮಟಾದಲ್ಲಿಯೂ ಇಂದು ಜನೌಷಧಿ ಕೇಂದ್ರ ಉದ್ಘಾಟನೆಗೊಂಡಿದ್ದು ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿಯವರು ಈ ಜನೌಷಧಿ ಮಳಿಗೆ ಉದ್ಘಾಟಿಸಿದರು. ಕುಮಟಾದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕನ ಎದುರುಗಡೆ ಕ್ಷತ್ರಿಯ ವಿಧ್ಯಾ ವರ್ಧಕ ಸಂಘದ ಕಟ್ಟಡದಲ್ಲಿ ಈ ಕೇಂದ್ರ ಪ್ರಾರಂಭಗೊಂಡಿದೆ.
IMG 20181106 WA0022

RELATED ARTICLES  ಗೋರೆಯಲ್ಲಿ ಕೃಷ್ಣಾಷ್ಟಮಿ ವಿಶೇಷ ಪೂಜೆ: ಐತಿಹಾಸಿಕ ಸ್ಥಳದ ಬಗ್ಗೆ ಇಂದು ನೀವು ಓದಲೇ ಬೇಕು.

ಉದ್ಘಾಟನಾ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಟೋನಿ ರೋಟ್ರಗೀಸ್, ಸಿ.ಪಿ.ಐ ಸಂತೋಷ ಶೆಟ್ಟಿ, ಉದ್ಯಮಿ ದತ್ತು ಕೋಡ್ಕಣಿ, ಸುಪ್ರಜ ನಾಯ್ಕ,ಸಂದೇಶ, ಚಂದನ್ ಇನ್ನಿತರರು ಹಾಜರಿದ್ದರು.

IMG 20181106 WA0029
ಈ ಜನೌಷಧಿ ಮಳಿಗೆಯಲ್ಲಿ ಜನತೆಗೆ ಅಗತ್ಯ ಔಷಧಿಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ದೇಶದ ಬಡಜನತೆಯ ಹಿತ ದೃಷ್ಟಿಯನ್ನು ಗಮದಲ್ಲಿಟ್ಟು ಎಲ್ಲ್ಲರೂ ಆರೋಗ್ಯವಂತರಾಗಿರಬೇಕೆಂಬ ಉದ್ದೇಶ ಜಾರಿಗೆ ತಂದಿರುವ ಜನೌಷಧಿ ಕೇಂದ್ರಗಳು ಕೇಂದ್ರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು ಬಡರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹಾಜರಿದ್ದ ಗಣ್ಯರು ಹೇಳಿದರು.