ಕುಮಟಾ: ತಾಲೂಕಿನ ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ನಿನ್ನೆ ಶಿವ ಗಂಗಾ ವಿವಾಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಕಳೆದ ಗಂಗಾಷ್ಟಮಿಯಂದು ದೇವರ ವಿವಾಹ ನಿಶ್ಚಯದ ಉತ್ಸವ ಜರುಗಿತ್ತು.

ಅಂತೆಯೇ ನರಕ ಚತುರ್ದಶಿಯಂದು ಗೋಧೂಳೀ ಸುಮುಹೂರ್ತದಲ್ಲಿ ದೇವರ ವಿವಾಹವು ಸಂಪನ್ನಗೊಂಡಿದೆ.

ದೇವಾಲಯದಿಂದ ಸಾಯಂಕಾಲ ಹೊರಟ ಉತ್ಸವವು ಸಮೀಪದ ಕಡೇಕೋಡಿಗೆ ತೆರಳುತ್ತದೆ, ಅಲ್ಲಿ ಸುಮುಹೂರ್ತದಲ್ಲಿ ಅರ್ಚಕರು ಮೃಂಗಲಾಷ್ಟವನ್ನ ಉಚ್ಛರಿಸುತ್ತಾರೆ.ತದನಂತರ ಮಾಲಾಧಾರಣೆಯಾಗಿ ವಿವಾಹವು ಸಾಂಕೇತಿಕವಾಗಿ ನಡೆಯುತ್ತದೆ. ಅಲ್ಲಿ ನೆರೆಯುವ ನೂರಾರು ಭಕ್ತರು ಸೇವೆಗೈದು ಕೃತಾರ್ಥರಾಗುತ್ತಾರೆ.

RELATED ARTICLES  ಜ. 14-15 ಮಾಸೂರಿನ ಸಂಕ್ರಾಂತಿ ಉತ್ಸವ

IMG 20181107 WA0003
ನಂತರ ಉತ್ಸವವು ಇನ್ನೂ ಎರಡು ಕಡೆ ಕುಳಿತು ಪೂಜೆ ಅಷ್ಟಾವಧಾನಾದಿ ಸೇವೆ ಪಡೆದು ದೇವಾಲಯಕ್ಕೆ ಮರಳುತ್ತದೆ.

ಪ್ರತೀವರ್ಷ ನಡೆದುಬಂದಿರುವ ಈ ವಿಶಿಷ್ಟ ಸಂಪ್ರದಾಯವು ಈ ವರ್ಷವೂ ಭಕ್ತರ ಶೃದ್ಧೆ , ನಿಷ್ಠೆಗಳಿಂದ ದೇವರ ಸನ್ನಿಧಿಯಲ್ಲಿ ಸಮರ್ಪಣೆಗೊಂಡಿದ್ದಲ್ಲದೇ ಈ ಉತ್ಸವ ಮಾಡುವಿಕೆಯಿಂದ ಲೋಕಕ್ಕೆಲ್ಲ ಒಳಿತಾಗಲಿ, ಮಂಗಲವಾಗಲಿ ಹಾಗೂ ಯಾವೆಲ್ಲ ಶುಭ ಫಲ ಲಭಿಸಬೇಕೋ ಅದು ಪ್ರಾಪ್ತವಾಗಲೆಂದು ಬೇಡಿಕೊಂಡರು.

RELATED ARTICLES  ಕಾರವಾರದ ಹಲವೆಡೆ ದೇವಳಮಕ್ಕಿಯಲ್ಲಿ ಸುಗ್ಗಿ ಮೇಳದ ಕುಣಿತ