ಕುಮಟಾ:- ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲಿನಲ್ಲಿ ಇಬ್ಬರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ ಘಟನೆ ಇದೀಗ ವರದಿಯಾಗಿದೆ.

ಪ್ರಮೋದ್ ನಾಯಕ(೫೧) ಹಾಗೂ ಅಮೋಘ ನಾಯಕ(೨೫) ಮೃತರಾಗಿದ್ದು ಮೃತರನ್ನು ಅಂಕೋಲಾ ತಾಲೂಕಿನ ಜಮಗೋಡು ಗ್ರಾಮದವರೆಂದು ಗುರ್ತಿಸಲಾಗಿದೆ.ಮೃತರು ಕುಟುಂಬದವರ ಜೊತೆ ಗೋಕರ್ಣಕ್ಕೆ ತೆರಳಿ ಸಮುದ್ರದಲ್ಲಿ ಈಜುವಾಗ ಘಟನೆ ನಡೆದಿದೆ. ಹಬ್ಬದ ಸಮಯದಲ್ಲಿ ಮನೆಯವರ ಜೊತೆ ಸೇರಿ ಇವರು ಈಜಲು ತೆರಳಿದ್ದರಂತೆ.

RELATED ARTICLES  ಅರ್ಹತೆ ಪಡೆದ ಮೂವರು ಕ್ರೀಡಾಳುಗಳು

ಇನ್ನು ಇವರ ಜೊತೆಗೇ ಸಮುದ್ರಕ್ಕೆ ಇಳಿದು ಸಮುದ್ರದಲ್ಲಿ ಮುಳುಗುತ್ತಿದ್ದ ಸಂಪತ್ ಹಾಗೂ ಸಂಗಮ್ ಎನ್ನುವವರನ್ನು ರಕ್ಷಣೆ ಮಾಡಲಾಗಿದ್ದು ಗೋಕರ್ಣ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲುಮಾಡಲಾಗಿದೆ.

RELATED ARTICLES  ಕಾರವಾರ ಕರಾವಳಿ ಉತ್ಸವ 2017ಕ್ಕೆ ಬರುತ್ತಾರಾ ಬಾಲಿವುಡ್ ಸಿಂಗರ್ ಶಾಲ್ಮಲಿ ಕೊಳ್ಗಡೆ?

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.