ಹೊನ್ನಾವರ: ತಾಲ್ಲೂಕಿನ ಎಸ್. ಡಿ.ಎಮ್ ಕಾಲೇಜಿನ ವಿದ್ಯಾರ್ಥಿಯಾದ ನಾರಾಯಣ ವಿನಾಯಕ ಹೆಗಡೆ ಇತನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಟ್ಟದಲ್ಲಿ ನಡೆದ ಶೇಟಲ್ ಬ್ಯಾಟ್ಮಿಂಟನ್ ಆಟದಲ್ಲಿ “ಯುನಿವರ್ಸಿಟಿ ಬ್ಲೂ” ಆಗಿ ಆಯ್ಕೆಯಾಗಿರುತ್ತಾರೆ.
ಇತನು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆದಿರುತ್ತಾನೆ. ಇತನು ಹೊನ್ನಾವರದ ಉದ್ಯಮಿ ವಿ. ಎನ್. ಹೆಗಡೆ ಹಾಗೂ ಲಕ್ಷ್ಮಿ ಹೆಗಡೆ ಅವರ ಪುತ್ರ. ಇತನ ಸಾಧನೆಗೆ ಹೊನ್ನಾವರದ ಜಿ. ಎಸ್.ಬಿ ಯುವವಾಹಿನಿ ಹರ್ಷ ವ್ಯಕ್ತಪಡಿಸಿದ್ದಾರೆ.