ಹೊನ್ನಾವರ: ವಾರ್ಷಿಕವಾಗಿ ಉತ್ತಮ ಕಾರ್ಯನಿರ್ವಹಿಸಿದ ಭಟ್ಕಳ ತಾಲೂಕು ಕಸಾಪ ಘಟಕ ಮತ್ತು ಕುಮಟಾ ತಾಲೂಕು ಕಸಾಪ ಘಟಕಗಳಿಗೆ ಕ್ರಮವಾಗಿ 2016-17 ಹಾಗೂ 2017-18ನೇ ಸಾಲಿನ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ.11ರಂದು ಮುಂಜಾನೆ 10 ಗಂಟೆಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದೆ.

RELATED ARTICLES  ಸಮಾಜದ ಸರ್ವತೋಮುಖ ಪ್ರಗತಿಗೆ ಶಿಕ್ಷಣ ಅವಶ್ಯಕ: ಭಾಸ್ಕರ್ ನಾಯಕ್

ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಅರವಿಂದ ಕರ್ಕಿಕೋಡಿ ಅವರು ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಮಿಮರ್ಶಕ ಡಾ.ಮೋಹನ ಚಂದ್ರಗುತ್ತಿ ಶಿವಮೊಗ್ಗ ಆಗಮಿಸಲಿದ್ದಾರೆ.

ಈ ಸಂದರ್ಭದಲಿ ಉತ್ತಮ ಕಾರ್ಯನಿರ್ವಹಿಸಿದ ಭಟ್ಕಳ ತಾಲೂಕು ಕಸಾಪ ಗಂಗಾಧರ ನಾಯ್ಕ ಹಾಗೂ ಕುಮಟಾ ತಾಲೂಕು ಕಸಾಪ ಅಧ್ಯಕ್ಷ ಡಾ.ಶ್ರೀಧರ ಉಪ್ಪಿನಗಣಪತಿ ಅವರನ್ನು ಆಯಾ ಘಟಕಗಳ ಪರವಾಗಿ ಗೌರವಿಸಿ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.

RELATED ARTICLES  ಉತ್ತರಕನ್ನಡದಲ್ಲಿ ಇಂದು 164 ಜನರಿಗೆ ಕರೋನಾ ಪಾಸಿಟಿವ್

ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲೆಯ ತಾಲೂಕು ಕಸಾಪಗಳನ್ನು ಪ್ರತಿವರ್ಷ ಆಯ್ಕೆ ಮಾಡಿ ಸಾಹಿತ್ಯ ಸಾರಥ್ಯ ಪ್ರಶಸ್ತಿ ನೀಡುವ ಕ್ರಮವನ್ನು ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿಯೇ ಮೊಟ್ಟ ಮೊದಲು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.