ಬೆಂಗಳೂರು: ಅಂಬಿಡೆಂಟ್ ಡೀಲ್ ಕೇಸ್ನಲ್ಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ನವೆಂಬರ್ 24ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ನವೆಂಬರ್ 24ರವರೆವಿಗೂ 14 ದಿನಗಳ ಕಾಲ ಜನಾರ್ಧನ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ, 1ನೇ ಎ.ಸಿ.ಎಂ.ಎಂ.ಎಂ. ನ್ಯಾಯಾಧೀಶ ಜಗದೀಶ್ ರವರು ತೀರ್ಪು ಪ್ರಕಟಿಸಿದರು ಎನ್ನಲಾಗಿದೆ. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.

ಈ ಪ್ರಕರಣವು ಸೇರಿ , ಮೂರನೇ ಬಾರಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಪರಪ್ಪನ ಅಗ್ರಹಾರದ ಜೈಲು ಸೇರುವಂತಾಗಿದೆ. ಇದರ ಮಧ್ಯೆ ನಾಳೆ ಜನಾರ್ದನ ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.