ಕಾರವಾರ ನಗರದ ಪಹರೆ ವೇದಿಕೆಯ ೨೦೦ ನೇ ವಾರದ ಸ್ವಚ್ಚತಾ ಕಾರ್ಯಕ್ರಮ ಪ್ರಯುಕ್ತ ನಗರದ ಠಾಗೋರ್ ಕಡಲ ತೀರದಲ್ಲಿ ಬೃಹತ್ ಸ್ವಚ್ಚತಾ ಕಾರ್ಯ ನಡೆಯಿತು. ಸ್ವಚ್ಚತಾ ಕಾರ್ಯ ಮುಗಿದ ಮೇಲೆ ಮಾತನಾಡಿದ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಕಾರವಾರ ಇಂದು ಪ್ರವಾಸೋದ್ಯಮದಲ್ಲಿ ಸಾಕಷ್ಟು ಬೆಳೆಯುತ್ತಿರುವ ಪ್ರದೇಶ. ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದವಾಗಿರುವ ಕಾರವಾರವನ್ನ ಸ್ವಚ್ಚವಾಗಿಡಲು ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದರು.
ಕಡಲ ತೀರದ ಮಯೂರ ವರ್ಮ ವೇದಿಕೆ ಬಳಿ ಬೆಳಿಗ್ಗೆ ೭ ಘಂಟೆಗೆ ಬೃಹತ್ ಸಂಖ್ಯೆಯಲ್ಲಿ ಸ್ವಚ್ಚತಾ ಕಾರ್ಯಕ್ಕೆ ಜಮಾವಣೆಯಾಗಿದ್ದರು. ಹಾಸನ ಮೂಲದ ಸ್ವಚ್ಚತೆಗಾಗಿ ನಿರಂತರ ಪ್ರಯತ್ನ ಪಡುತ್ತಿರುವ ಉಮಾಪತಿ ಮೊದಲಿಯಾರ್ ಹಾಗೂ ನಗರಸಭೆಯ ಸದಸ್ಯರುಗಳು ಸ್ವಚ್ಚತಾ ಕಾರ್ಯಕ್ಕೆ ಚಾಲನೆಯನ್ನ ನೀಡಿದರು.
ಇದಾದ ನಂತರ ಸುಮಾರು ಒಂದು ಘಂಟೆಗಳ ಕಾಲ ಕಡಲ ತೀರದಲ್ಲಿ ಬಿದ್ದಿದ್ದ ಕಸವನ್ನ ತೆಗೆಯುವ ಮೂಲಕ ಸ್ವಚ್ಚತೆ ನಡೆಸಲಾಯಿತು. ಸ್ವಚ್ಚತಾ ಕಾರ್ಯದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳು, ವಿವಿದ ಸಂಘ ಸಂಸ್ಥೆಯ ಪ್ರಮುಖರು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ಆಟೋ ಚಾಲಕರು ಸೇರಿದಂತೆ ಹಲವು ರಂಗದವರು ಪಾಲ್ಗೊಂಡು ಸ್ವಚ್ಚತಾ ಕಾರ್ಯವನ್ನ ಮಾಡುವ ಮೂಲಕ ಗಮನ ಸೆಳೆದರು.
ಹಿರಿಯ ಪತ್ರಕರ್ತ ಕರಾವಳಿ ಮುಂಜಾವು ಸಂಪಾದಕ ಗಂಗಾದರ ಹಿರೇಗುತ್ತಿ ಮಾತನಾಡಿ ಪಹರೆ ವೇದಿಕೆಯ ಕಾರ್ಯ ನಿಜಕ್ಮೂ ಮೆಚ್ಚಲೇ ಬೇಕು. ಕಸ ಸಮಸ್ಯೆ ಹೋಗಲಾಡಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಪಹರೆಯ ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದರು.