ಹೊನ್ನಾವರ : 2017-18 ನೇ ಸಾಲಿನಲ್ಲಿ ಕುಮಟಾ ಸಾಹಿತ್ಯ ಪರಿಷತ್ ಗೆ ಒಲಿದ ಸಾಹಿತ್ಯ ಸಾರಥ್ಯ ಪ್ರಶಸ್ತಿಯನ್ನು ಹೊನ್ನಾವರದಲ್ಲಿ ಕ.ಸಾ.ಪ ಜಿಲ್ಲಾಧ್ಶಕ್ಷ ಅರವಿಂದ ಕರ್ಕಿಕೋಡಿˌ ಸಾಹಿತಿ ಡಾ.ಶ್ರೀಪಾದ ಶೆಟ್ಟಿ. ಸಾಹಿತಿ ಡಾ.ಮೋಹನ ಚಂದ್ರಗುತ್ತಿ ಪ್ರಧಾನ ಮಾಡಿದರು.
ಇದೇ ಸಂದರ್ಭದಲ್ಲಿ 2016-17 ನೇ ಸಾಲಿನ ಸಾಹಿತ್ಶ ಸಾರಥ್ಶ ಭಟ್ಕಳ ಕ.ಸಾ.ಪ ಅಧ್ಶಕ್ಷ ಶ್ರೀ ಗಂಗಾಧರ ನಾಯ್ಕ ಸ್ವೀಕರಿಸಿದರು.
ಎಲ್ಲರ ಪ್ರೀತಿ ಸಹಕಾರದಿಂದ ಈ ಪ್ರಶಸ್ತಿ ನಮ್ಮ ತಾಲೂಕಿಗೆ ಬಂದಿದೆ. ಎಲ್ಲಾ ಮಾಧ್ಯಮದ ಪತ್ರಕರ್ತ ಬಂಧುಗಳೂ ನಮ್ಮ ಪರಿಷತ್ತಿನ ಕಾರ್ಯಕ್ರಮಗಳಿಗೆ ತುಂಬು ಮನಸಿನ ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರವನ್ನು ಮನದುಂಬಿ ನೆನೆಯುತ್ತ ಈ ಪ್ರಶಸ್ತಿಯನ್ನು ನಮ್ಮ ಭಟ್ಕಳ ತಾಲೂಕು ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಹಿರಿಯರು, ಮಾರ್ಗದರ್ಶನ ನೀಡಿದ ಸರ್ವರು, ಹಾಗೆಯೇ ಕಸಾಪ ಘಟಕದ ಕಾರ್ಯಕಾರಿ ಸಮಿತಿ, ಹಾಗೂ ಎಲ್ಲ ಕನ್ನಡದ ಮನಸುಗಳಿಗೆ ಅತ್ಯಂತ ಅಭಿಮಾನದಿಂದ ಅರ್ಪಿಸುತ್ತಿದ್ದೇನೆ ಎಂದರು.
ಕುಮಟಾ ಕ.ಸಾ.ಪ ಗೆ ಒಲಿದ ಸಾಹಿತ್ಶ ಸಾರಥ್ಯ ಪ್ರಶಸ್ತಿಯನ್ನು ಕುಮಟಾ ಕ.ಸಾ.ಪ ಬಳಗದ ಪರವಾಗಿ ಅಧ್ಯಕ್ಷರಾದ ಡಾ ಶ್ರೀಧರ ಉಪ್ಪಿನಗಣಪತಿ ಸ್ವೀಕರಿಸಿದರು.
ಈ ಪ್ರಶಸ್ತಿ ಯನ್ನು ಕುಮಟಾದ ಸಮಸ್ತ ಕ.ಸಾ.ಪ ಬಳಗ ಹಾಗೂ ಸಮಸ್ತ ಕನ್ನಡ ಮನಸ್ಸುಗಳಿಗೆ ಅರ್ಪಿಸುತ್ತೇನೆಂದು ಅವರು ತಿಳಿಸಿದರು.