ಹೊನ್ನಾವರ: ಸಜ್ಜನ ಮತ್ತು ಸಾತ್ವಿಕ ಮನೋಭಾವದ, ರಾಜಕೀಯ ಪ್ರಾತಿನಿಧ್ಯದಲ್ಲಿ ತಮ್ಮದೇ ಪ್ರಾಮುಖ್ಯತೆ ಪಡೆದ ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ಸಚಿವರಾದ ಅನಂತಕುಮಾರ ಅವರು ಇಂದು ನಿಧನರಾಗಿರುವುದಕ್ಕೆ ಮಾಜಿ ಸಚಿವ ಶಿವಾನಂದ ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರರ ನಿಧನವು ಭಾರತೀಯ ಜನತಾ ಪಾರ್ಟಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಸರಳ ವ್ಯಕ್ತಿತ್ವ, ನೇರ ನುಡಿಯಿಂದ ಎಲ್ಲರ ಗಮನ ಸೆಳೆಯುವ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಚಾರವಾಗಿ ಸಾಕಷ್ಟು ವಿಷಯಗಳನ್ನು ತಾರ್ಕಿಕವಾಗಿ ಚರ್ಚಿಸಿ ಸಾಮಾಜಿಕ ಬೆಳವಣಿಗೆಗೆ ಸದಾ ಸನ್ನದ್ದರಾಗಿರುತ್ತಿದ್ದರು.
ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.