ಬೆಂಗಳೂರು: ಕೇಂದ್ರ ಸಚಿವ ಶ್ರೀ ಅನಂತ ಕುಮಾರ್ ಅವರು ಅನಾರೋಗ್ಯದಿಂದಾಗಿ ಮರಣಹೊಂದಿರುವುದು ವಿಷಾದನೀಯ ಸಂಗತಿಯಾಗಿದ್ದು, ಅಖಿಲ ಹವ್ಯಕ ಮಹಾಸಭೆಯು ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತದೆ.
ಅನಂತಕುಮಾರ್ ಅವರು ಹವ್ಯಕ ಮಹಾಸಭೆಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು, ಹಲವಾರು ವಿಚಾರಗಳಲ್ಲಿ ಮಹಾಸಭೆಗೆ ಅಗತ್ಯ ಸಹಕಾರವನ್ನೂ ನೀಡಿದ್ದರು. ಸಂಸದರಾಗಿ, ಮಂತ್ರಿಗಳಾಗಿ ಜನಪರ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿದ್ದ ಅವರು, ಜನಾನುರಾಗಿಗಳಾಗಿದ್ದರು.
ಸದಾ ಕ್ರಿಯಾಶೀಲರಾಗಿದ್ದ ಅವರು ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿ, ಅಕಾಲಿಕ ಮರಣ ಹೊಂದಿರುವುದು ದುಃಖಕರ ವಿಚಾರವಾಗಿದ್ದು, ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹವ್ಯಕ ಮಹಾಸಭೆ ಆಶಿಸುತ್ತದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ) ದ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಯವರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.