ಕುಮಟಾ : ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಲು ಸುಪ್ರೀಂ ಕೋರ್ಟ ತೀರ್ಪು ನೀಡಿದ ಹಿನ್ನಲೆಯಲ್ಲಿ ಕುಮಟಾದಲ್ಲಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದ್ದರು.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮರು ಪರಿಶೀಲನೆಗೆ ಒತ್ತಾಯ ಕೇಳಿ ಬಂದಿದೆ. 

ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅದರದ್ದೇ ಆದ ಆಚರಣೆ ಹಾಗೂ ಪಾವಿತ್ರ್ಯ ಇದೆ. ಆ ನಂಬಿಕೆಯನ್ನು ಗೌರವಿಸಬೇಕು ಎಂದು ಇದೇ ಸಂದರ್ಭದಲ್ಲಿ ವಿನಂತಿ ಮಾಡಲಾಯಿತು.

RELATED ARTICLES  ಶಿರಸಿ-ಹಾವೇರಿ ರಸ್ತೆ ಮೇಲ್ದರ್ಜೆಗೆ : ಮಾಹಿತಿ ನೀಡಿದ ಸಂಸದ ಅನಂತ ಕುಮಾರ ಹೆಗಡೆ.

ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಶಬರೀಮಲೆಗೆ ಹೋಗಲು ಅವಕಾಶ ನೀಡಬೇಕು ಎಂದು ತೀರ್ಪು ನೀಡಿದೆ.ಇದು ಅಯ್ಯಪ್ಪ ಭಕ್ತರಿಗೆ ನೋವನ್ನು ಉಂಟುಮಾಡಿದೆ. ಸುಪ್ರೀಂ ಮಹಿಳೆಯರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಿರುವುದನ್ನು ವಾಪಸ್ ಪಡಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

RELATED ARTICLES  ಇಂದಿನ‌ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ದ್ವಾದಶ ರಾಶಿಗಳ ಫಲಾಫಲ

ಪಟ್ಟಣದ ಮಾಸ್ತಿಕಟ್ಟೆಯಿಂದ ಮೆರವಣಿಗೆ ನಡಿಸಿದ ಅಯ್ಯಪ್ಪ ಭಕ್ತರು ಸಹಾಯಕ ಕಮಿಷನ್ ಕಚೇರಿಯವರೆಗೆ ಮೆರವಣಿಗೆ ನಡೆಸಿ ಸಹಾಯಕ ಕಮೀಷನರ್ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನೂರಾರು ಅಯ್ಯಪ್ಪ ಸ್ವಾಮಿ ಭಕ್ತರು ಪಾಲ್ಗೊಂಡಿದ್ದರು. ಶಾಸಕರರಾದ ದಿನಕರ ಶೆಟ್ಟಿ, ಹಿಂದೂ ಹೋರಾಟಗಾರ ಸೂರಜ್ ನಾಯ್ಕ ಸೋನಿ, ವಕೀಲರಾದ
ಆರ್.ಜಿ ನಾಯ್ಕ, ಗುರುಸ್ವಾಮಿ,ಹಾಗೂ ಸಂಪತ್ ಕುಮಾರ್ ಇನ್ನಿತರರು ಹಾಜರಿದ್ದರು.