ಕುಮಟಾ: ತಾಲೂಕಿನ ಹವ್ಯಕ ಮಂಡಲದ ವತಿಯಿಂದ
ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯ ಯೋಜನೆಯ ಚೆಕ್ ವಿತರಣೆ ಕಾರ್ಯಕ್ರಮವು ಕೆಕ್ಕಾರಿನ ಶ್ರೀ ರಘೋತ್ತಮ ಮಠದಲ್ಲಿ‌ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಗಣೇಶ ಹೆಗಡೆ ಪ್ರಾಸ್ತಾವಿಕವಾಗಿ ಶ್ರೀಪೀಠದ ಶಿಷ್ಯಕಳಕಳಿ, ಭಕ್ತವಾತ್ಸಲ್ಯ, ಸಮಾಜ ಮುಖಿ ಕಾರ್ಯಕ್ರಮಗಳ ಕುರಿತು ಮಾತನಾಡಿದರು.

ಬಳಿಕ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ ಸುವರ್ಣಗದ್ದೆ ಇವರು ಮಾತನಾಡಿ, ವಿದ್ಯಾ ಸಹಾಯವು ಸಮಾಜ ನಿಮ್ಮೊಂದಿಗಿದೆ ಎಂಬುದರ ಸಂಕೇತವಾಗಿದೆ ಎಂದರು.

RELATED ARTICLES  ಆದಿಕವಿ ಪುರಸ್ಕಾರಕ್ಕೆ ಪುಟ್ಟು ಕುಲಕರ್ಣಿ ಆಯ್ಕೆ

ಇದರೊಂದಿಗೆ ವಿದ್ಯಾರ್ಥಿಗಳ ಭ್ರಮಾಲೋಕ, ಹವ್ಯಕರ ಸಂಖ್ಯೆಯ ಕಳವಳಕಾರಿ ಸ್ಥಿತಿ, ಸಮಾಜದಲ್ಲಿ ಹವ್ಯಕರ ಸ್ಥಿತಿ, ಅದನ್ನು ಬದಲಿಸಲು ಶ್ರೀಪೀಠವು ಕೈಗೊಂಡ ಕಾರ್ಯಕ್ರಮ, ಅದರ ಫಲ ಇವುಗಳ ಕುರಿತಾಗಿ ಮಾಹಿತಿ ನೀಡಿದರು.‌ ಮುಂದುವರಿದು, ಪ್ರತಿಯೊಬ್ಬ ವಿದ್ಯಾರ್ಥಿಯು ಮಠದಲ್ಲಿ ಸೇವೆ ಸಲ್ಲಿಸಬೇಕು, ವರ್ಷಕ್ಕೊಮ್ಮೆಯಾದರೂ ಗುರು ದರ್ಶನ ಪಡೆಯಬೇಕು ಎಂದ ಅವರು ಇದರಿಂದ ಉಂಟಾಗುವ ಧನ್ಯತೆಯ ಭಾವದ ಕುರಿತು ವಿವರಿಸಿದರು. ಶಿಷ್ಯಭಾವವು ಆಯ್ಕೆಯಲ್ಲ ಬದಲಿಗೆ ನಮ್ಮ ಹುಟ್ಟಿನೊಂದಿಗೆ ಬರುವಂತಹುದು. ಆದ್ದರಿಂದ ನಾವೆಲ್ಲ ಮಠದ ಸೇವೆಯಲ್ಲಿ ಧನ್ಯತೆಯನ್ನು ಕಾಣೋಣ ಎಂದ ಅವರು ಎಲ್ಲರ ಭವಿಷ್ಯ ಬಂಗಾರವಾಗಲಿ ಎಂದು ಆಶಿಸಿದರು.

RELATED ARTICLES  ಶಿರಸಿಯಲ್ಲಿ ಜ. 6 ಮತ್ತು 7ರಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ 15ನೇ ರಾಜ್ಯ ಸಮ್ಮೇಳನ

ಮಂಡಲದ ಕೋಶಾಧ್ಯಕ್ಷರಾದ ಶ್ರೀ ಕೆ. ಆರ್. ಹೆಗಡೆಯವರ ಉಸ್ತುವಾರಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯರು ವಿದ್ಯಾರ್ಥಿಗಳಿಗೆ ಚಕ್ ವಿತರಣೆ ಮಾಡಿದರು. ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಮೂಲ :ಶ್ರೀಮುಖ ಆನ್ ಲೈನ್