ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ನಡೆಯುತ್ತಿದ್ದು, ನ್ಯಾಷನಲ್ ಕಾಲೇಜು ಮೈದಾನದಿಂದ ರವಾನೆ ಮಾಡಲಾಗುತ್ತಿದೆ. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಮಿಲಿಟರಿ ವಾಹನದಲ್ಲಿ ಮೆರವಣಿಗೆ ಮೂಲಕ ಶರೀರವನ್ನು ಕೊಂಡೊಯ್ಯಲಾಗುತ್ತಿದೆ.

ಅಗಲಿದ ನಾಯಕನಿಗೆ ಅಂತಿಮ ಯಾತ್ರೆಗೆ ಮುನ್ನ ಪುರೋಹಿತರಿಂದ ವೇದಮಂತ್ರಘೋಷ ನಡೆಯುತ್ತಿದೆ. ಅಲ್ಲದೇ ನಾಯಕನಿಗೆ ಅಂತಿಮ ವಿದಾಯ ಹೇಳಲು ಬಂದ ಅಪಾರ ಜನಸ್ತೋಮ ಕೂಡಿದೆ. ಸಕಲ ಸರಕಾರಿ ಗೌರವಗಳೊಂದಿಗೆ ಅನಂತಕುಮಾರ್ ಅವರ ಅಂತಿಮ ಯಾತ್ರೆ ನಡೆಯುತ್ತಿದೆ.

RELATED ARTICLES  ಸರ್ಕಾರಿ ಹುದ್ದೆಗಳ ನೇಮಕಕ್ಕೆ ಆಯೋಜಿಸುವ ಪ್ರಕ್ರಿಯೆಯು ಕ್ಯಾಮೆರಾ ಕಣ್ಗಾವಲಿನಲ್ಲೇ ನಡೆಯಬೇಕು :ಸುಪ್ರೀಂ ಕೋರ್ಟ್‌.

ಸಾರ್ವಜನಿಕರು ಸಾಮೂಹಿಕವಾಗಿ ವಂದೇ ಮಾತರಂ ಮೂಲಕ ಅನಂತ್ ಕುಮಾರ್ ಗೆ ಅಂತಿಮ ನಮನ ಸಲ್ಲಿಸಲಾಯಿತು. 12.15 ಕ್ಕೆ ಅಂತಿಮ ದರ್ಶನಕ್ಕೆ ತೆರೆ ಬಿದ್ದಿದ್ದು, ಚಾಮರಾಜ ಪೇಟೆಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ.ಸೇನೆಯ ಉಸ್ತುವಾರಿಯಲ್ಲಿ, ಸಕಲ ಸರಕಾರಿ ಗೌರವದೊಂದಿಗೆ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ವರದಿಯಾಗಿದೆ.
.

RELATED ARTICLES  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಡಾ.ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ