ಕುಮಟಾ: ಕಳೆದ ಕೆಲ ದಿನಗಳಿಂದ ಸ್ವಲ್ಪಮಟ್ಟಿಗೆ ಕುಮಟಾದಲ್ಲಿ ಕಡಿಮೆಯಾಗಿದ್ದ ಕಳ್ಳತನ ಪ್ರಕರ್ಣ ಇಂದು ಮತ್ತೆ ಸುದ್ದಿಯಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ಕುಮಟಾದ ಕೊಪ್ಪಳಕರವಾಡಾದಲ್ಲಿ ನಡೆದಿದೆ.
ಝರೀನಾ ಶೇಖ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು ಕೊಲ್ಲಾಪುರಕ್ಕೆ ದರ್ಗಾಕ್ಕೆಂದು ಕುಟುಂಬಸ್ಥರು ತೆರಳಿದ್ದ ವೇಳೆ ಘಟನೆ ನಡೆದಿದೆ.
ಮನೆಯಲ್ಲಿದ್ದ 36 ತೊಲೆ ಬಂಗಾರ, 2 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .ಪೋಲೀಸರು ಚೋರರಿಗಾಗಿ ಬಲೆ ಬೀಸಿದ್ದಾರೆ.