ಕುಮಟಾ: ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯ ವಿದ್ಯಾರ್ಥಿಗಳು ಕರಾಟೆಯ ಕಟಾ ಮತ್ತು ಕಮಿಟೆ ಸ್ಪರ್ಧೆಗಳಲ್ಲಿ ಅದ್ವಿತೀಯ ಸಾಧನೆ ಮೆರೆದು ನಾಲ್ಕು ಚಿನ್ನ, ಏಳು ಬೆಳ್ಳಿ ಹಾಗೂ ಹದಿನೇಳು ಕಂಚಿನ ಪದಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿರುತ್ತಾರೆ.

ದರ್ಶನ ನಾಯ್ಕ, ಹರ್ಷ ಪಟಗಾರ, ಭೂಮಿಕಾ ನಾಯ್ಕ ಮತ್ತು ತನುಜಾ ನಾಯ್ಕ ಬಂಗಾರದ ಪದಕ ಹಾಗೂ ಗಮನಾರ್ಹ ಪ್ರದರ್ಶನ ನೀಡಿದ ನಿಶ್ಚಿತ್ ಹಿಣಿ, ಆಷ್ಟಿನ್ ಫರ್ನಾಂಡಿಸ್, ಶಶಾಂಕ ಎಸ್. ಹರಿಕಾಂತ, ಸುದೀಪ ನಾಯ್ಕ, ಪ್ರಹ್ಲಾದ್, ಚಂದನ, ಶುಭಾ ನಾಯ್ಕ, ದೀಕ್ಷಾ ಭಂಡಾರಿ, ಸಿಂಡ್ರೆಲ್ಲಾ ಫರ್ನಾಂಡಿಸ್ ರಜತ ಮತ್ತು ಕಂಚಿನ ಪದಕಗಳನ್ನು ಹಂಚಿಕೊಂಡರು.

RELATED ARTICLES  ಶಿರಸಿ- ಕುಮಟಾ ಮಾರ್ಗ ಸಂಪೂರ್ಣ ಬಂದ್ ಇಲ್ಲ :ಉಪ ವಿಭಾಗಾಧಿಕಾರಿ ಅಜಿತ್ ಎಂ.

ಅವರು ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ನಾಲ್ಕನೆಯ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಸಿ ಪದಕ ಹಾಗೂ ಪ್ರಶಸ್ತಿ ಪತ್ರದಿಂದ ಪುರಸ್ಕøತರಾಗಿದ್ದಾರೆ. ರಾಜ್ಯ ಕರಾಟೆ ಶಿಕ್ಷಕರ ಸಂಘ, ರಾಜ್ಯ ಟ್ರೆಡಿಶನಲ್ ಶೋಟೂ-ಕಾಯ್ ಕರಾಟೆ ಅಸೋಸಿಯೇಶನ್, ರಾಜ್ಯ ಭಾರತ್ ಕರಾಟೆ ಅಕಾಡೆಮಿ ಹಾಗೂ ಜಿಲ್ಲಾ ಕರಾಟೆ ಶಿಕ್ಷಕರ ಸಂಘಗಳ ಸಹಯೋಗದಡಿ ಈ ಸ್ಪರ್ಧೆ ನಡೆದಿತ್ತು.

RELATED ARTICLES  ಎಂ. ನಾರಾಯಣ ಭಟ್ಟರ ಎಂಬತ್ತರ ಅಭಿನಂದನಾ ಹೊತ್ತಿಗೆ 'ಕಲಾನಿಧಿ' ಬಿಡುಗಡೆ

ಶಾಲೆಯಲ್ಲಿ ತರಬೇತಿ ನೀಡಿದ ಕರಾಟೆ ಶಿಕ್ಷಕ ದಯಾನಂದ ನಾಯ್ಕ, ದೈಹಿಕ ಶಿಕ್ಷಕ ಎಲ್.ಎನ್.ಅಂಬಿಗ, ಮುಖ್ಯ ಶಿಕ್ಷಕ ಎನ್.ಆರ್.ಗಜು ವಿಜೇತರನ್ನು ಅಭಿನಂದಿಸಿದ್ದಾರೆ.