ಕಾರವಾರ: ಯಲ್ಲಾಪುರದಲ್ಲಿ ಡಿ. 22, 23 ರಂದು ನಡೆಯಲಿರುವ ಉತ್ತರಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅರ್ಥಪೂರ್ಣ ಲಾಂಛನ ರಚಿಸಿಕೊಡಲು ಕಲಾವಿದರಿಗೆ ಆಹ್ವಾನ ನೀಡಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಆಯ್ಕೆಯಾದ ಲಾಂಛನ ರಚಿಸಿದ ಕಲಾವಿದರಿಗೆ 2 ಸಾವಿರ ರೂ. ಬಹುಮಾನವನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನ.17 ರೊಳಗೆ ಗಂಗಾಧರ ಕೊಳಗಿ, ಗೌರವ ಕಾರ್ಯದರ್ಶಿ ಜಿಲ್ಲಾ ಕಸಾಪ ಸಿದ್ದಾಪುರ (ಉ.ಕ.) ಇವರ [email protected] ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಮಾಹಿತಿಗೆ ಮೊ.ಸಂ. 9448609871 ಸಂಪರ್ಕಿಸಬಹುದು.