ಕುಮಟಾ: “ಆರೋಗ್ಯವೇ ಭಾಗ್ಯ ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣ ಗೆಗೆ ಹಲ್ಲಿನ ಅರೋಗ್ಯ ಅತೀ ಅವಶ್ಯಕ ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶದ್ವಾರವಿದ್ದಂತೆ” ಎಂದು ಉಮ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಡಾ.ಕರುಣಾಕರ ನಾಯ್ಕ ಅಂಕೋಲಾ ನುಡಿದರು.
ಅವರು ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಮತ್ತು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಸಂಯುಕ್ತಾಶ್ರಯದಲ್ಲಿ ಹಿರೇಗುತ್ತಿ ಹೈಸ್ಕೂಲ್‍ನಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ “ಹಲ್ಲಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣ ಗೆÉ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ” ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಸ್ಕೂಲ್ ಮುಖ್ಯಾಧ್ಯಾಪಕರಾದ ರೋಹಿದಾಸ.ಎಸ್.ಗಾಂವಕರ “ಇಂದಿನ ಆಹಾರ ಪದ್ದತಿಯಿಂದ ಆರೋಗ್ಯ ಹದಗೆಡುತ್ತದೆ ಆದ್ದರಿಂದ ಪಾಸ್ಟಫುಡ್‍ನಿದ ದೂರವಿದ್ದು ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎ.ಪಿ.ಎಮ್.ಸಿ ಅಂಕೋಲಾ-ಕಾರವಾರ ಅಧ್ಯಕ್ಷರಾದ ಗಣಪತಿ ನಾಯಕ ಸೂರ್ವೆ ಮಾತನಾಡಿ “ಸೇವೆಯ ಪ್ರತಿಫಲ ಸೇವೆ ಎಂಬಂತೆ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದೆ” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಸಂತೋಷ ಸಾಮಂತ, ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಎನ್.ರಾಮು.ಹಿರೇಗುತ್ತಿ, ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಮಹಾದೇವ ಗೌಡ, ಜಾನಕಿ ಗೊಂಡ, ಶಿಲ್ಪಾ ನಾಯಕ, ಇಂದಿರಾ ನಾಯಕ, ಸೌಜನ್ಯ ಬಂಟ್, ಕವಿತಾ ಅಂಬಿಗ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿಧಿ ವೆಂಕಟೇಶ ಕಾರ್ಯಕ್ರಮ ನಿರೂಪಿಸಿದರು, ವಿನಯಾ ಗೌಡ ಸ್ವಾಗತಿಸಿದಳು, ಸಹನಾ ಗೌಡ ವಂದಿಸಿದಳು, ಹಲ್ಲಿನ ಸಮಸ್ಯೆ ಇರುವ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ನಂತರ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಲಯನ್ಸ ಕ್ಲಬ್ ವತಿಯಿಂದ ಉಚಿತವಾಗಿ ಟೂತಪೇಸ್ಟ್.ಬ್ರಸ್ ವಿತರಿಸಲಾಯಿತು.
ವರದಿ:ಎನ್ .ರಾಮು.ಹಿರೇಗುತ್ತಿ