ಕುಮಟಾ : ಮಕ್ಕಳ ದಿನಾಚರಣೆಯ ದಿನವಾದ ಇಂದು ತನ್ನ ಹುಟ್ಟು ಹಬ್ಬವನ್ನು ಕುಮಟಾ ತಾಲೂಕಿನ ಖ್ಯಾತ ಹಾಗೂ ಜನಸ್ನೇಹಿ ವೈದ್ಯರಾದ ದಿ.ಡಾ.ಎಂ.ಡಿ.ನಾಯ್ಕ ರವರ ಮೊಮ್ಮಗ ಕುಮಟಾ ಗುಡಿಗಾರಗಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಪ್ರಕಾಶ ಎಂ.ನಾಯ್ಕ ರವರ ಪುತ್ರ ಕುಮಾರ ವಿಶ್ವನಾಥ ನಾಯ್ಕ ವಿಶೇಷವಾದ ರೀತಿಯಲ್ಲಿ ಆಚರಿಸಿಕೊಂಡಿದ್ದಂತು ನಿಜ.
ಹೇಗೆ ಅಂತೀರಾ?ಮಗನ ಶಾಲಾ ಅವಧಿಯ ನಂತರ ಗುಡಿಗಾರಗಲ್ಲಿ ಶಾಲೆಗೆ ಆಗಮಿಸಿ ಸಭಾಭವನಕ್ಕೆ ಹಣದ ತುರ್ತು ಅಗತ್ಯವನ್ನು ಮನಗಂಡಿದ್ದ ಅವರು ದೇಣಿಗೆಯಾಗಿ ₹5000/-ಚೆಕ್ ನ್ನು ಮಗನಿಂದ ಕೊಡಿಸಿ ಎಲ್ಲರಿಗೂ ಸಿಹಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾದರು.
ಹಿಂದೆ ತಾನು ಕಲಿತ ಶಾಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರ ಸಹಾಯ ಸಂಸ್ಥೆಯ ಪಾಲಿಗೆ ಮಹತ್ವದ್ದು ಎನಿಸಿದೆ. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಅವರು ಈ ಕಾರ್ಯ ಮಾಡಿ ಎಲ್ಲರ ಪ್ರಶಂಸೆ ಗಳಿಸಿದರು.
ಅವರಿಗೆ ಶಾಲೆಯ ಬಳಗ ಸದಾ ಚಿರ ಋುಣಿಯಾಗಿರುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಸತ್ವಾಧಾರಕ್ಕೆ ಮಾಹಿತಿ ನೀಡಿದ್ದಾರೆ.