ಕುಮಟಾ : ಡಾ ಎ ವಿ ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.
ಎಲ್ ಕೆ ಜಿ ಇಂದ ಮೂರನೇ ತರಗತಿ ವರೆಗಿನ ಮಕ್ಕಳು ವಿವಿಧ ವೇಶ ಭೂಷಣ ಗಳೊಂದಿಗೆ ತಮ್ಮಲ್ಲಿ ಹುದುಗಿರುವ ಕಲೆಯನ್ನು ಪ್ರದರ್ಶಿಸುವ ಮೂಲಕ ಸೇರಿದ ಎಲ್ಲಾ ಪಾಲಕರನ್ನು ಮೂಕ ವಿಸ್ಮಿತರನ್ನಾಗಿಸಿದರು.
ಮೀನು ಮಾರುವವಳು, ಯಕ್ಷಗಾನ ದ ಪಾತ್ರಧಾರಿ, ಶಿಲಾ ಬಾಲಿಕೆ, ಸಾಯಿಬಾಬ, ಬಲೂನ್ ಮನುಷ್ಯ, ಮೋದಿ ಜೀ, ಕಿತ್ತೂರು ಚೆನ್ನಮ್ಮ, ಚಿತ್ರನಟಿ ಯರ ವೇಷ, ಹನುಮಂತ ಹೀಗೆ ಅನೇಕ ವೇಷ ಭೂಷಣ ಗಳು ಪುಟ್ಟ ಮಕ್ಕಳಲ್ಲಿರು ಕಲೆಯ ಮೂಲಕ ವೇಷಕ್ಕೆ ಜೀವ ತುಂಬಿತ್ತು.
ಶಾಲೆಯ ಕಾರ್ಯದರ್ಶಿ ವಿನೋದ ಪ್ರಭು ಮಾತನಾಡಿ ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದ ಇದೆ.. ಶಿಕ್ಷಣದಲ್ಲಿಯೂ ಹೆಚ್ಚಿನ ಒತ್ತು ನೀಡುವುದರೊಂದಿಗೆ ಇತರ ಚಟುವಟಿಕೆಗಳಲ್ಲಿಯೂ ಸಹ ಮಕ್ಕಳು ಭಾಗವಹಿಸುವಂತೆ ಹಾಗೂ ಅವರಲ್ಲಿರುವ ಕಲೆಯನ್ನು ಗುರುತಿಸಿಸುದಕ್ಕೆ ಇಂತಹ ಕಾರ್ಯಕ್ರಮ ನಡೆಸಲಾಗಿದೆ.
ಸೊಲು ಗೆಲವು ಮುಖ್ಯ ಅಲ್ಲ ಭಾಗವಹಿಸುವ ಮನೋಸ್ಥೈರ್ಯ ಮಕ್ಕಳಲ್ಲಿ ಬೆಳೆಯಬೇಕು ಹಾಗಾದಾಗ ಮಾತ್ರ ನಾವು ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ಕೊಡಲು ಸಾಧ್ಯ ಎಂದರು
ಮುಖ್ಯಾಧ್ಯಾಪಕಿ ಪ್ರಿಯಾ ನರೋನಾ ಹಾಗೂ ಶಿಕ್ಷಕ ವೃಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡರು. ಸ್ಪರ್ಧೆಯ ಕೊನೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ಹಾಗೂ ಪಾಲಕರಿಗೆ ಕೆನರಾ ಎಜ್ಯುಕೇಶನ್ ಸೊಸೈಟಿ ಧನ್ಯವಾದ ತಿಳಿಸಿದರು.