ಕಾರವಾರ: ಕೇಂದ್ರ ಸರ್ಕಾರದ ಪ್ರಾಯೋಜಿತ ಜನರಿಕ್ ಔಷಧಿ ಟೆಂಡರ್ ಪ್ರಕ್ರಿಯೆಯ ಸಮರ್ಪಕವಾಗಿ ಆಗುತ್ತಿಲ್ಲ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಜನರಿಕ್ ಔಷಧ ಟೆಂಡರ್ ನಲ್ಲಿ‌ ಗೊಂದಲಗಳು ಇದೆ. ಕೇಂದ್ರದಿಂದ ಖರೀದಿಸಿ ಜನತೆಗೆ ಕಡಿಮೆ‌ಬೆಲಯಲ್ಲಿ ನೀಡಬೇಕಿದ್ದ ಔಷಧಗಳನ್ನು ಖಾಸಗಿ ಟೆಂಡರ್ ನೀಡುವ ಮೂಲಕ ನಡೆಸಲಾಗುತ್ತಿದೆ. ಇದರಿಂದ ಜನರಿಗೆ ಕಡಿಮೆ ಬೆಲೆಯ ಔಷಧಿ ಸೌಲಭ್ಯ ಸಿಗುತ್ತಿಲ್ಲ ಎಂದು ಶ್ರೀಕಲಾ ಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದರು. ಜಿ.ಪಂ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ಸಭೆಯ ಗಮನಕ್ಕೆ ತಂದರು.
IMG 20181115 WA0010

ಅದಲ್ಲದೇ ಕೆಲ ಇಲಾಖೆಗಳಲ್ಲಿ ಅಧಿಕಾರಿಗಳು ಸರಿಯಾದ ಸಮಯಕ್ಕೆ‌ ಹಾಜರಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.ಇದನ್ನು ತಡೆಯಲು ಬಯೋ ಮೆಟ್ರಿಕ್ ಅಳಡಿಕೆ ಮಾಡಬೇಕೆಂದು ಅವರು ತಿಳಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು ಇನ್ನು ಒಂದು ವರ್ಷದ ಒಳಗಾಗಿ ಈ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

RELATED ARTICLES  ಕುಮಟಾದಲ್ಲೊಂದು ಅಪಘಾತ : ಸಿನಿಮೀಯ ರೀತಿಯಲ್ಲಿ ಇಬ್ಬರು ಬಚಾವ್..!

ಇದೇ ಸಂದರ್ಭದಲ್ಲಿ ಕೆಲವೆಡೆ ಜನರಿಕ್ ಔಷಧಿ ಕೇಂದ್ರ ತೆರೆದರೂ ಅಲ್ಲಿ ನಕಲಿ ಔಷಧಿ ದೊರೆಯುತ್ತದೆ ಎಂಬ ಗಾಳಿ ಸುದ್ದಿಯ ಹಿನ್ನೆಲೆಯಲ್ಲಿ ಜನರು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಕೆಲ ಸದಸ್ಯರು ವಿಷಯ ಪ್ರಸ್ತಾಪಿಸಿದರು. ಜನರಲ್ಲಿರುವ ತಪ್ಪು ಭಾವನೆ ತೊಡೆಯಲು ಜಾಗೃತಿ ಕಾರ್ಯಕ್ರಮ ನಡೆಸುವುದಾಗಿ ಸಿಇಒ ಹೇಳಿದರು. ಅಂಕೊಲಾದಲ್ಲಿ ಆಯುರ್ವೆದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಹಲವು ಔಷಧಿಗಳು ಲಭ್ಯವಿಲ್ಲ ಎಂದು ಹೊರಗಡೆ ಬರೆಯುತ್ತಿರುವ ಬಗೆಗೆ ಅಸಮಾಧಾನ ವ್ಯಕ್ತವಾಯಿತು.

ಜಿಪಂ ಸಾಮಾನ್ಯ ಸಭೆಯಲ್ಲಿ ಹಿಂದೆ ಭಟ್ಕಳ ಶಾಸಕರಾಗಿದ್ದ ಮಂಕಾಳ ವೈದ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ನಾಗರಾಜ ನಾಯ್ಕ ಅವರನ್ನು ಕಾಯ್ಕಿಣಿ ಗ್ರಾಪಂನಿಂದ ಸಿದ್ದಾಪುರದ ಅಲಗೇರಿಗೆ ವರ್ಗಾವಣೆ ಮಾಡಿದ ವಿಷಯ ಸತತ ಎರಡನೇ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಯಿತು. ನಾಗರಾಜ ನಾಯ್ಕ ವರ್ಗಾವಣೆ ರದ್ದು ಮಾಡುವಂತೆ ಒತ್ತಾಯಗಳು ಪ್ರಮುಖವಾಗಿ ಕೇಳಿಬಂದವು. ವಿಧಾನಸಭೆ ಚುನಾವಣೆಯಲ್ಲಿ ಒಂದು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಹಾಗೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬ ದೂರು ಇದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಅವರನ್ನು ವರ್ಗಾಯಿಸಲಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ಮರು ನಿಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದರು.

RELATED ARTICLES  ಅಕ್ರಮ ಗೋವಾ ಸರಾಯಿ ಸಾಗಾಟ, ಆರೋಪಿತನ ಬಂಧನ, ಗೋವಾ ಸರಾಯಿ ಹಾಗೂ ಸಾಗಟಕ್ಕೆ ಬಳಸಿದ್ದಕಂಟೇನರ ಲಾರಿ ವಶ.

ನರೇಗಾ ಯೋಜನೆ ಅಳವಡಿಕೆ‌ ಹಾಗೂ‌ ಗ್ರಾಮ ಪಂಚಾಯತ್ ಗಳ ದತ್ತು‌ಸ್ವೀಕಾರದ ಮೂಲಕ ಸ್ವಚ್ಚ ಭಾರತದ ಅಳವಡಿಕೆ‌ ಪ್ರಕ್ರಿಯೆಯ ಬಗ್ಗೆ ಮಹತ್ವದ ವಿಚಾರಗಳು ಚರ್ಚೆಯಾದವು.

ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂತೋಷ ರೇಣಕೆ, ಸಂಜಯ ಹಣಬರ್, ಜಯಮ್ಮ ಹಿರಳ್ಳಿ ವೇದಿಕೆಯಲ್ಲಿದ್ದರು.