ಅನಂತಕುಮಾರ್ ಕುಟುಂಬಕ್ಕೆ ಶ್ರೀರಾಮಚಂದ್ರಾಪುರಮಠದಿಂದ ಸಾಂತ್ವನ ಪತ್ರ

ಕೇಂದ್ರ ಸಚಿವ ಅನಂತಕುಮಾರ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಶ್ರೀರಾಮಚಂದ್ರಾಪುರಮಠದಿಂದ ತೇಜಸ್ವಿನಿ ಅವರಿಗೆ ಪತ್ರವನ್ನು ಬರೆಯಲಾಗಿದ್ದು, ಶ್ರೀಕರಾರ್ಚಿತ ಶ್ರೀರಾಮಾದಿ ದೇವತಾನುಗ್ರಹದಿಂದ ಅಗಲಿಕೆಯ ನೋವನ್ನು ಮರೆಯುವ ಶಕ್ತಿಯು ಅವರ ಕುಟುಂಬಕ್ಕೆ ಸಿಗಲಿ ಎಂದು ಹಾರೈಸಲಾಗಿದೆ.

ಅನಂತಕುಮಾರ್ ಉತ್ತಮ ರಾಜಕಾರಣಿಗಳಲ್ಲೊಬ್ಬರು, ಬಾಲ್ಯದಲ್ಲಿಯೇ ರಾಷ್ಟ್ರಭಕ್ತಿಗೆ ಸಮರ್ಪಿಸಿಕೊಂಡವರು, ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದವರು. ಅವರು ಇನ್ನಷ್ಟು ಕಾಲ ಬದುಕಿ ಸತ್ಕಾರ್ಯಗಳನ್ನು ಮಾಡಬೇಕಿತ್ತು, ಆದರೆ ಅಕಾಲಿಕವಾಗಿ ನಿಧನರಾಗಿರುವುದು ಕುಟುಂಬಕ್ಕೆ ನೋವಿನ ಸಂಗತಿ.

RELATED ARTICLES  ವಾಸಿಸುವವನೇ ಮನೆಯೊಡೆಯ: ಸಿದ್ದು ಸರಕಾರಕ್ಕೆ ಮತ್ತೊಂದು ಯಶಸ್ಸು!

ಹುಟ್ಟು ಸಾವುಗಳು ವಿಧಿಯ ಅಧೀನವಾದ್ದರಿಂದ ಅಗಲಿಕೆಯ ನೋವಿನಿಂದ ಕುಟುಂಬವು ಹೊರಬರಬೇಕಿದೆ. ಶ್ರೀಕರಾರ್ಚಿತ ಶ್ರೀರಾಮಾದಿ ದೇವತಾನುಗ್ರಹದಿಂದ ಅವರು ನೋವನ್ನು ಮರೆಯುವಂತಾಗಲಿ ಹಾಗೂ ಶ್ರೀಕರಾರ್ಚಿತ ದೇವತಾ ಕೃಪೆ ಕುಟುಂಬಕ್ಕೆ ಒಳಿತನ್ನು ಮಾಡಲಿ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರಯೀ ಮಹಾಸ್ವಾಮಿಗಳು ಹಾರೈಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

IMG 20181115 WA0001
ಶ್ರೀಮಠದ ನಿಯೋಗದಿಂದ ಅನಂತಕುಮಾರ್ ಕುಟುಂಬದ ಭೇಟಿ :

ಅಕಾಲಿಕ ಮರಣಹೊಂದಿರುವ ಅನಂತಕುಮಾರ್ ಅವರ ಕುಟುಂಬ ಸದಸ್ಯರನ್ನು ಶ್ರೀಮಠದ ನಿಯೋಗ ನಿನ್ನೆ ರಾತ್ರಿ ಭೇಟಿಮಾಡಿ; ಸಂತಾಪ ಸೂಚಿಸಿ, ಶ್ರೀಮಠದಿಂದ ಸಾಂತ್ವನ ಪತ್ರ ನೀಡಲಾಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು, ಶ್ರೀನಿರ್ದೇಶ ಕಾರ್ಯದರ್ಶಿ ಸಿಎಸ್ ಜಯರಾಮ್ ಕೊರಿಕ್ಕಾರ್, ಕಾಮದುಘಾ ವಿಭಾಗದ ಮಂಜಪ್ಪ ಗುಂಡಿ ಹಾಗೂ ಶ್ರೀಮತಿ ಗೀತಾ ಮಂಜಪ್ಪ ಇವರು ಶ್ರೀಗಳ ಸಂದೇಶವನ್ನು ತಿಳಿಸಿ, ತೇಜಸ್ವಿನಿ ಅನಂತಕುಮಾರ್ ಅವರಿಗೆ ಸಾಂತ್ವನ ಪತ್ರ ನೀಡಿ ಸಂತಾಪ ಸೂಚಿಸಿದರು.

RELATED ARTICLES  ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಶ್ರೀಗಳಿಗೆ ಇಂದು 111ನೇ ಹುಟ್ಟುಹಬ್ಬದ ಸಂಭ್ರಮ.