ಕುಮಟಾ: ಹೊನ್ನಾವರ ತಾಲೂಕಿನ ಸಮೀಪದ ಹಳದೀಪುರದ ಕುದಬೈಲ ಹಾಗೂ ಇಂದಿರಾನಗರದ ನಿವಾಸಿಗಳು ಇವತ್ತು ಕುಮಟಾ ದಲ್ಲಿ ಶಾಸಕ ಶ್ರೀ ದಿನಕರ ಕೆ ಶೆಟ್ಟಿ ಅವರನ್ನು ಭೇಟಿ ಮಾಡಿ ಗೇರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.
ಹಳದೀಪುರ ಗ್ರಾಮದ ಸರ್ವೆ ನಂಬರ್ 11 / 88 ರಲ್ಲಿ ಹೊಸದಾಗಿ ಗೇರುಬೀಜ ಸಂಸ್ಕರಣ ಘಟಕ ಆರಂಭಿಸಲು ಹಳದಿಪುರ ಗ್ರಾಮ ಪಂಚಾಯತಿಯಲ್ಲಿ ನಿರಪೇಕ್ಷಣಾ ಪತ್ರ ಪಡೆದಿದ್ದರು. ಪಂಚಾಯತಿಯವರು ಸಹ ಹತ್ತಿರ ಜನವಸತಿ ಪ್ರವೇಶ ಇದ್ದರು ಪರವಾನಿಗೆ ನೀಡಿದ್ದರು ಇದನ್ನು ಗಮನಿಸಿದ ಕುದಬೈಲ ಇಂದಿರಾ ನಗರ ನಿವಾಸಿಗಳು ಪಂಚಾಯತಕ್ಕೆ ಆಕ್ಷೇಪಣೆ ತಿಳಿಸಿದರು.
ಪಂಚಾಯತಿಯವರು ಪರವಾನಿಗೆ ನೀಡಿದ ಸ್ಥಳದ ಹತ್ತಿರದಲ್ಲಿಯೇ ಇಂಡಿಯನ್ ಗ್ಯಾಸ್ ಇವರ ವಿತರಣ ಕೇಂದ್ರ ಮತ್ತು ಗೋದಾಮು ಇದೆ, ಕಾರಣ ಭವಿಷ್ಯದಲ್ಲಿ ಬೆಂಕಿ ಅಪಘಾತ ಆಗುವ ಭೀತಿ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ . ಗೇರು ಬೀಜ ಘಟಕ ಆರಂಭಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವ ಸಂಭವ ಇದೆ ಎಂದು ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ .
ಹಾಗೊಂದು ವೇಳೆ ತಮ್ಮ ಆಕ್ಷೇಪಣೆಯನ್ನು ಮೀರಿ ಗೇರು ಬೀಜ ಘಟಕ ಸ್ಥಾಪಿಸಲು ಅನುಮತಿ ನೀಡಿದರೆ ನಾವೆಲ್ಲ ಸೇರಿ ಧರಣಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇಂದು ಸುಮಾರು ಹದಿನೈದರಿಂದ ಇಪ್ಪತ್ತು ಜನ ಅಲ್ಲಿನ ಸಾರ್ವಜನಿಕರು ಶಾಸಕರನ್ನು ಭೇಟಿಯಾಗಿ ತಮ್ಮ ಆಕ್ಷೇಪಣಾ ಪತ್ರವನ್ನು ಶಾಸಕರಿಗೆ ನೀಡಿದರು.ಈ ಸಂದರ್ಭದಲ್ಲಿ ಶಿವಾನಂದ ನಾಯ್ಕ,ಗಣಪತಿ ನಾಯ್ಕ ,ರಾಮರಾಯ ನಾಯ್ಕ, ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.