ಹೊನ್ನಾವರ : ಹಿಂದೊಮ್ಮೆ ತಮ್ಮನ ಪ್ರಾಣ ರಕ್ಷಣೆಗೆ ತನ್ನ ಜೀವವನ್ನೇ ಪಣವಾಗಿಟ್ಟಿದ್ದ ಹುಡುಗಿಯ ಸಾಹಸ ಮನೆ ಮಾತಾಗಿತ್ತು.

ಆಕಳು ದಾಳಿಯಿಂದ ಪುಟ್ಟ ತಮ್ಮನನ್ನು ರಕ್ಷಣೆ ಮಾಡಿ ಸಾಹಸ ಮೆರೆದಿದ್ದ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣದ 8 ವರ್ಷದ ಬಾಲಕಿ ಆರತಿ ಶೇಟ್ ಎಂಬ ಬಾಲಕಿಯನ್ನ ಪ್ರಸಕ್ತ ಸಾಲಿನ ಮಕ್ಕಳ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವಿಲಗೋಣದ ಕಿರಣ್ ಪಿ.ಶೇಟ್ ಹಾಗೂ ಆಶಾ ದಂಪತಿ ಪುತ್ರಿಯಾಗಿರುವ ಈಕೆ 2018 ಫೆಬ್ರುವರಿ 13 ರಂದು ಮನೆಯ ಅಂಗಳದ ಮುಂದೆ ತನ್ನ ತಮ್ಮ ಕಾರ್ತಿಕ್ ನೊಂದಿಗೆ ಆಟವಾಡುತ್ತಿದ್ದಳು. ಇದೆ ಸಮಯಕ್ಕೆ ರಸ್ತೆಯಲ್ಲಿ ಓಡಿ ಬಂದ ಆಕಳೊಂದು ಕೆಂಪು ಅಂಗಿ ಧರಿಸಿದ್ದ ಮಗುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಅಲ್ಲದೆ ಆಕಳು ಕೊಂಬಿನಿಂದ ತಿವಿಯತೊಡಗಿತ್ತು. ಆದರೆ ಆಕಳು ದಾಳಿಗೆ ಅಂಜದ ಬಾಲಕಿ ತನ್ನ ತಮ್ಮನ ರಕ್ಷಣೆಗೆ ನೆಲೆಯೂರಿ ನಿಂತಿದ್ದಳು. ಆಟಿಕೆ ಗಾಡಿಯಲ್ಲಿ ಕುಳಿತಿದ್ದ ತಮ್ಮನನ್ನು ಎತ್ತಿಕೊಂಡು ಆಕಳಿಗೆ ತನ್ನ ಬೆನ್ನನ್ನು ಕೊಟ್ಟು ತಮ್ಮನನ್ನು ರಕ್ಷಣೆ ಮಾಡಿದ್ದಳು. ಅಷ್ಟರಲ್ಲಿ ಮಕ್ಕಳು ಕೂಗಿಕೊಳ್ಳುತ್ತಿರುವುದನ್ನು ತಿಳಿದು ಮನೆಯವರು ಓಡಿ ಬಂದು ಆಕಳನ್ನು ಓಡಿಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

RELATED ARTICLES  ಮದ್ಯ ಖರೀದಿಸಲು ಬಾರ್ ಮುಂದೆ ಕ್ಯೂ! ಯಲ್ಲಾಪುರದಲ್ಲಿ ಎಲೆಕ್ಷನ್ ಎಫೆಕ್ಟ ಏನ್ ಕೇಳ್ತೀರಾ?

ವಿಡಿಯೋ ಅಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಬಾಲಕಿಯ ಸಾಹಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನು ಗುರುತಿಸಿದ ಕರ್ನಾಟಕ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನೀಡುವ ಶೌರ್ಯ ಪ್ರಶಸ್ತಿಗೆ ಬಾಲಕಿಯನ್ನು ಆಯ್ಕೆ ಮಾಡಿದೆ.

RELATED ARTICLES  ಹೆಗಡೆ ತಣ್ಣೀರಕುಳಿಯಲ್ಲಿ ಹೈಟೆಕ್ ಅಂಗನವಾಡಿ ಉದ್ಘಾಟನೆ

ಆದರೆ ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಿದ್ದು, ಮುಂದಿನ ದಿನಾಂಕ ನಿಗದಿಯಾಗಬೇಕಿದೆ.