ಕುಮಟಾ : ಡಾ ಎ ವಿ ಬಾಳಿಗಾ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.

ಎಲ್ ಕೆ ಜಿ ಇಂದ ಮೂರನೇ ತರಗತಿ ವರೆಗಿನ ಮಕ್ಕಳು ವಿವಿಧ ವೇಶ ಭೂಷಣ ಗಳೊಂದಿಗೆ ತಮ್ಮಲ್ಲಿ ಹುದುಗಿರುವ ಕಲೆಯನ್ನು ಪ್ರದರ್ಶಿಸುವ ಮೂಲಕ ಸೇರಿದ ಎಲ್ಲಾ ಪಾಲಕರನ್ನು ಮೂಕ ವಿಸ್ಮಿತರನ್ನಾಗಿಸಿದರು…
ಮೀನು ಮಾರುವವಳು, ಯಕ್ಷಗಾನ ದ ಪಾತ್ರಧಾರಿ, ಶಿಲಾ ಬಾಲಿಕೆ, ಸಾಯಿಬಾಬ, ಬಲೂನ್ ಮನುಷ್ಯ, ಮೋದಿ ಜೀ, ಕಿತ್ತೂರು ಚೆನ್ನಮ್ಮ, ಚಿತ್ರನಟಿ ಯರ ವೇಷ, ಹನುಮಂತ ಹೀಗೆ ಅನೇಕ ವೇಷ ಭೂಷಣ ಗಳು ಪುಟ್ಟ ಮಕ್ಕಳಲ್ಲಿರು ಕಲೆಯ ಮೂಲಕ ವೇಷಕ್ಕೆ ಜೀವ ತುಂಬಿತ್ತು.

RELATED ARTICLES  ಚಂಡಮಾರುತ ತಂದ ಅವಾಂತರ : ಜನತೆ ತತ್ತರ

ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಚಂದ ಚಂದ ಉಡುಗೆಗಳನ್ನು ತೊಟ್ಟು ಭಾಗವಹಿಸಿದರು. “ಅವನಿ ಹುಲಿ” ಯ ವೇಶ ಧರಿಸಿ, Save the Tiger ಎಂಬ ಸಂದೇಶ ಕೊಟ್ಟ ನಕ್ಷಾ ಉಪಾಧ್ಯಾಯ ಮೊದಲ ಸ್ಥಾನ ಪಡೆದಳು.

RELATED ARTICLES  ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು: ಶಾಸಕ ದಿನಕರ ಶೆಟ್ಟಿ