ಭಟ್ಕಳ- ಇಲ್ಲಿನ ಚಿತ್ರಾಪುರ ಪರಿಜ್ಞಾನ ಸಭಾಗೃಹ ದಲ್ಲಿ ಗುರುವಾರ ಉಮೇಶ ಮುಂಡಳ್ಳಿ ಸಾರಥ್ಯದಲ್ಲಿ ಪ್ರೇಮ ಕವಿತೆಗಳ ಮಧುರ ಗಾನ ನಡೆಯಿತು. ಚಿತ್ರಾಪುರ ಮಠದ ಪ್ರಧಾನ ಅರ್ಚಕರಾದ ವೇದಮೂರ್ತಿ ನಾಗೇಶ ಭಟ್ ಹಳದಿಪುರ ಅವರ ಮಗ ಗೌತಮ ಹಳದಿಪುರ ಹಾಗೂ ಮಿಥಾಲಿ ನಾಯಕ ಮುಂಬಯಿ ಅವರ ಆರತಕ್ಷತೆ ಕಾರ್ಯಕ್ರಮ ದಲ್ಲಿ ಭಟ್ಕಳ ನಿನಾದ ಸಾಹಿತ್ಯ ಸಂಗೀತ ಸಂಚಯ ಅವರಿಂದ ಪ್ರೇಮ ಕವಿತೆಗಳ ಮಧುರ ಗಾನ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ನೇತೃತ್ವದಲ್ಲಿ ನಡೆದ ಸಂಗೀತ ಕಾರ್ಯಕ್ರಮ ಪ್ರೇಮಕವಿ ಎಂದೆ ಜನಮಾನಸದಲ್ಲಿ ಉಳಿದ ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ಕವಿತೆಯಿಂದ ಆರಂಭಗೊಂಡಿತು.ನಂತರ ವಿ.ಸೀತಾರಾಮಯ್ಯ ಅವರ ಗೀತ ಎನ್ನ ಜೀವನ ಪ್ರೀತಿ ಎನ್ನ ಭಾವನ, ಎಂ.ಎನ್.ವ್ಯಾಸರಾವ್ ಅವರ ನೀ ಇಲ್ಲದೆ ನನಗೇನಿದೆ, ದ.ರಾ‌.ಬೇಂದ್ರೆಯವರ ಒಂದು ಬಾರಿ ನನ್ನ ನೋಡಿ ಮಂದ ನಗಿ ಹಂಗ ಬೀರಿ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ ಲೋಕದ ಕಣ್ಣಿಗೆ ರಾಧೆಯು ಕೂಡ ಹಾಗೂ ಬನ್ನಿ ಭಾವಗಳೆ ಬನ್ನಿ ನನ್ನೆಡೆಗೆ ಕರೆಯುವೆ ಕೈ ಬೀಸಿ, ಎಚ್ ಎಸ್ ವಿ ಅವರ ಬಯಲಿನೊಳಗೆ ಯಾರೊ ಮರೆತ ಗೀತೆಗಳು ಜೊತೆಗೆ ನಾಡಿನ ಅನೇಕ ಹಿರಿಯ ಕವಿಗಳ ಪ್ರೇಮ ಕವಿತೆ ಗಳ ಜೊತೆ ತಮ್ಮ ಒಂದು ಕವಿತೆ ಏಕೊ ಏನೊ ನಮ್ಮ ನಡುವೆ ಕವಿತೆಗೂ ಮುಂಡಳ್ಳಿ ಅವರು ಧ್ವನಿಯಾದರು.

RELATED ARTICLES  ನಾಡಿನ ಏಳ್ಗೆಗಾಗಿ ಯುವ ಸಂಘಟನೆಯ ಪಾತ್ರ ಮಹತ್ವದ್ದು: ಶಾಸಕ ದಿನಕರ ಕೆ. ಶೆಟ್ಟಿ

ವಿನೂತನವಾಗಿ ನಡೆದ ಈ ಗಾಯನ ಮದುವೆ ಮನೆಯಲ್ಲಿ ಪ್ರೇಮದ ಸಿಂಚನವಾದಂತ ಅ‌ನುಭವ ತಂದಿತು. ಇದು ಎಲ್ಲರ ಪ್ರಶಂಸೆ ಪಡೆಯಿತು.

ಈ ಸಂದರ್ಭದಲ್ಲಿ ಮುಂಡಳ್ಳಿ ಯವರೊಂದಿಗೆ ವಿನಾಯಕ ಭಂಡಾರಿ ಕೊಳಲು, ದೂರದರ್ಶನ ಮಧುರ ಮಧುರ ಕಾರ್ಯಕ್ರಮದ ಕಲಾವಿದ ನವೀನ್ ಶೇಟ್ ಕೀಬೋರ್ಡ್ ನಲ್ಲಿ, ವಿನೋದ ಭಂಡಾರಿ ತಬಲಾದಲ್ಲಿ ಸಹಕರಿಸಿದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು